ADVERTISEMENT

ಕೊಡಗು: ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:43 IST
Last Updated 22 ಫೆಬ್ರುವರಿ 2026, 1:43 IST
ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಪೂಜಾ ಕೈಂಕರ್ಯ ನಡೆಯಿತು.
ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಪೂಜಾ ಕೈಂಕರ್ಯ ನಡೆಯಿತು.   

ಕುಶಾಲನಗರ: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮದ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೂರು ದಿನಗಳ‌ ಕಾಲ ವಿಜೃಂಭಣೆಯಿಂದ ಜರುಗಲಿರುವ ಪುನರ್ ಪ್ರತಿಷ್ಠಾನ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ‌ ಪೂಜಾ ಕೈಂಕರ್ಯ, ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ದಿ, ಮಹಾ ಸಂಕಲ್ಪ, ವಾಸ್ತು ರಕ್ಷೋಘ್ನ ಹೋಮ, ಪ್ರಸಾದ ಶುದ್ದಿ, ವಾಸ್ತು ಬಲಿ, ಬಿಂಬ ಪ್ರಸಾದ ಸಂಗ್ರಹ ನಂತರ ಮುಖ್ಯದ್ವಾರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಲಾಯಿತು. ಗ್ರಾಮದ ಹಿರಿಯರಾದ ವಿಮಲ ವೀರಪ್ಪ ಅವರು‌ ನೂತನ ದ್ವಾರ ಉದ್ಘಾಟಿಸಿದರು. ಮಹಾ ಗಣಪತಿ ಹೋಮ, ಸಂಸ್ಕಾರ ಹೋಮ, ನೂತನ ಬಿಂಬಕ್ಕೆ ಸಂಸ್ಕಾರ, ಬಿಂಬಶುದ್ದಿ, ಕಳಶ ನವೀಕರಣ, ಪ್ರಾಯಶ್ಚಿತ್ತ ಹೋಮ, ಕಲಾಹೋಮ, ಕಲಾಕರ್ಷಣೆ ನಡೆಯಿತು. ಅರ್ಚಕ ರಾಮಚಂದ್ರ ಭಟ್ ತಂಡದಿಂದ ಪೂಜಾ ವಿಧಿ ನೆರವೇರಿಸಲಾಯಿತು.

ADVERTISEMENT

ಮುಳ್ಳುಸೋಗೆ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕಳಶ ಮೆರವಣಿಗೆ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದ್ದು, ಪೂಜೋತ್ಸವದಲ್ಲಿ ಆದಿಚುಂಚನಗಿರಿ ಮಠದ ಹಾಸನ-ಕೊಡಗು ಶಾಖೆಯ ಶಂಭುನಾಥ ಸ್ವಾಮೀಜಿ, ವಿರಾಜಪೇಟೆಯ ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕನ್ನಂಬಾಡಿ ಅಮ್ಮನವರ ಮತ್ತು ಮಾರಮ್ಮ ದೇವಸ್ಥಾನ ಸೇವಾ
ಸಮಿತಿ ಉಪಾಧ್ಯಕ್ಷ ಎಂ.ಆರ್.ನಂಜುಂಡ ತಿಳಿಸಿದರು.

ಈ ವೇಳೆ ಶ್ರೀಮತ್ ಕನ್ನಂಬಾಡಿ ಅಮ್ಮನವರ ಮತ್ತು ಮಾರಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಂ.ಎಚ್.ಅಣ್ಣೇಗೌಡ್ರು, ಕಾರ್ಯದರ್ಶಿ ಆರ್.ಪ್ರವೀಣ್, ಖಜಾಂಚಿ ಎಂ.ವಿ.ದಾಸೇಗೌಡ, ನಿರ್ದೇಶಕರಾದ ಎಂ.ಟಿ.ರಘು, ಎಂ.ಪಳನಿಸ್ವಾಮಿ, ಎಂ.ಆರ್.ಮಹದೇವಪ್ಪ, ಎಂ.ಸಿ.ಸಂತೋಷ್, ಎಂ.ಬಿ.ಸುರೇಶ್ ಕುಮಾರ್, ಎಂ.ಎಚ್.ಚಂದ್ರಪ್ಪ, ಎಂ.ಎಸ್.ಪ್ರಸನ್ನ, ವಿ.ಎ.ದಿನೇಶ್, ಎಂ.ಕೆ.ಚಂದ್ರು, ಎಂ.ಜಿ.ಅಜಿತ್ ಕುಮಾರ್, ಡಿ.ಟಿ.ರಂಗಸ್ವಾಮಿ ಇದ್ದರು.

ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ಗೋಪುರವನ್ನು ಗ್ರಾಮದ ಹಿರಿಯರಾದ ವಿಮಲ ವೀರಪ್ಪ ಅವರು‌ ನೂತನ ದ್ವಾರ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.