ಕುಶಾಲನಗರ: ನದಿ, ಜಲಮೂಲಗಳ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಶ್ರಮಿಸುತ್ತಿದೆ ಎಂದು ಪುರಸಭೆ ಸದಸ್ಯ ವಿ.ಎಸ್. ಆನಂದ್ ಕುಮಾರ್ ಹೇಳಿದರು.
ಇಲ್ಲಿನ ಕಾವೇರಿ ಆರತಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ 178 ನೇ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪ್ರತಿಯೊಬ್ಬರೂ ನದಿ, ಪರಿಸರ ಬಗ್ಗೆ ಕಾಳಜಿ ಹೊಂದಬೇಕು. ನದಿ ಸಂರಕ್ಷಣೆ ಸಂಬಂಧ ಪುರಸಭೆ ಮೂಲಕ ಕ್ರಿಯಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಬೇದಾರ್ ಮೇಜರ್ ಎಸ್.ಆರ್. ಮಾದಪ್ಪ ಮಾತನಾಡಿ, ತಮ್ಮ ಸಂಘದ ಮೂಲಕ ನದಿ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಲಾಗುವುದು ಎಂದರು.
ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಅಷ್ಟೋತ್ತರ, ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು. ಗೆಳೆಯರ ಬಳಗದ ಪ್ರಮುಖರಾದ ಎಂ.ಎಸ್ ರಾಜೇಶ್, ಜಯಪ್ರಕಾಶ್, ನರೇಂದ್ರ, ಆಯೂಬ್, ಪ್ಯಾರಡೈಸ್ ರವಿ, ಇಬ್ರಾಹಿಂ, ತೇಜ, ವಿಮಲ್ ಜೈನ್, ಹಮೀದ್, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಸುಬೇದಾರ್ ಎಳ್ತಂಡ ರಂಜಿತ್, ಜೆ ಪಿ ನರೇಶ್ ಕುಮಾರ್, ಸುಬೇದಾರ್ ಮೇಜರ್ ಕೆ ಎಂ ಸೋಮಯ್ಯ, ಎನ್ ಎಸ್ ಕರುಂಬಯ್ಯ, ಎಸ್ ಎಂ ತಮ್ಮಯ್ಯ, ಎಳ್ತಂಡ ಕಾವೇರಪ್ಪ, ಮೀನಾಕ್ಷಿ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕರಾದ ವನಿತಾ ಚಂದ್ರಮೋಹನ್, ಧರಣಿ ಚೈತನ್ಯ, ವೈಶಾಖ್, ಪ್ರವೀಣ್ ಮತ್ತು ಬಳಗದ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.