ADVERTISEMENT

ಸಿದ್ದಾಪುರ: ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

​ಪ್ರಜಾವಾಣಿ ವಾರ್ತೆ
Published 15 ಮೇ 2024, 19:16 IST
Last Updated 15 ಮೇ 2024, 19:16 IST
ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಉಪಟಳ ನೀಡುತ್ತಿದ್ದ ‘ದಕ್ಷ’ (ಮಧ್ಯದಲ್ಲಿರುವುದು) ಹೆಸರಿನ ಕಾಡಾನೆಯನ್ನು ‘ಮಹೇಂದ್ರ’ ಮತ್ತು ‘ಭೀಮ’ ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆ ಹಿಡಿದರು
ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಉಪಟಳ ನೀಡುತ್ತಿದ್ದ ‘ದಕ್ಷ’ (ಮಧ್ಯದಲ್ಲಿರುವುದು) ಹೆಸರಿನ ಕಾಡಾನೆಯನ್ನು ‘ಮಹೇಂದ್ರ’ ಮತ್ತು ‘ಭೀಮ’ ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆ ಹಿಡಿದರು    

ಮಡಿಕೇರಿ: ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಜನವಸತಿ ಪ್ರದೇಶಗಳತ್ತ ಪದೇ ಪದೇ ದಾಳಿ ನಡೆಸುತ್ತಿದ್ದ ‘ದಕ್ಷ’ ಎಂಬ ಹೆಸರಿನ ಗಂಡಾನೆಯನ್ನು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು.

30 ವರ್ಷದ ಈ ಆನೆ ಸೆರೆಗೆ ಮಂಗಳವಾರದಿಂದ ಒಟ್ಟು 8 ಸಾಕಾನೆಗಳ ನೆರವಿನಿಂದ ನೂರಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು.

ಎಮ್ಮೆಗುಂಡಿ ಬಳಿ ಪತ್ತೆಯಾದ ಈ ಆನೆಯ ಬೆನ್ನತ್ತಿದ ಸಿಬ್ಬಂದಿ 5 ಕಿ.ಮೀ ದೂರದವರೆಗೂ ಸಾಗಿ, ಮಾಲ್ದಾರೆ ಅರಣ್ಯ ಪ್ರದೇಶದ ಗಡಿಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಸಮೀಪದ ಕೆರೆಯೊಂದರಲ್ಲಿ ಒರಗಿದ ಈ ಆನೆಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ. ಅಲ್ಲಿಂದ 80 ಕಿ.ಮೀ. ದೂರದ ನಾಗರಹೊಳೆಯ ಬಿಸಿಲವಾಡಿ ಕೆರೆಯ ಸಮೀಪ ಇದನ್ನು ಬಿಡಲಾಗುವುದು ಎಂದು ಡಿಸಿಎಫ್ ಜಗನ್ನಾಥ್ ತಿಳಿಸಿದರು.

ADVERTISEMENT

‘ಸಾಕಾನೆ ಶಿಬಿರಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಸಿದ್ದಾಪುರ ಭಾಗದಲ್ಲಿ ಉಪಟಳ ನೀಡುತ್ತಿರುವ ‘ಆಕಾಂಕ್ಷಾ’ ಮತ್ತು ‘ಮೀರಾ’ ಎಂಬ ಕಾಡಾನೆಗಳಿಗೂ ರೇಡಿಯೊ ಕಾಲರ್ ಅಳವಡಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.