ADVERTISEMENT

ಕಾಂಗ್ರೆಸ್ ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:37 IST
Last Updated 9 ನವೆಂಬರ್ 2025, 4:37 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ನೂತನ ಸಮಿತಿಯ ಮೊದಲ ಸಭೆಯನ್ನು ಡಿ.12 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದೆ 

ಜಿಲ್ಲಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಮೋಹನ್ ಮೌರ್ಯ, ಬಾಚುಮಂಡ ಲವ ಚಿಣ್ಣಪ್ಪ, ಕೋಶಾಧಿಕಾರಿಯಾಗಿ ಎ.ಕೆ.ಹ್ಯಾರಿಸ್, ಜಿಲ್ಲಾ ಸಂಯೋಜಕರಾಗಿ ಎಚ್.ನಟೇಶ್ ಗೌಡ, ಕೇಟೋಳಿರ ಮೋಹನ್ ರಾಜ್, ಎಸ್.ಸಿ.ಶರತ್ ಶೇಖರ್, ಮತ್ರಂಡ ದಿಲ್ಲು, ಜಿಲ್ಲಾ ಜಂಟಿ ಸಂಯೋಜಕರಾಗಿ ಕೆ.ನಂಜುಂಡಸ್ವಾಮಿ, ಪುದಿಯನೆರವನ ರೇವತಿ ರಮೇಶ್, ಇಸಾಕ್ ಖಾನ್, ಪಂಕಜ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾನಂದ ಬಂಗೇರ, ಜುಬೈರ್, ಎಚ್.ಡಿ.ಗಣೇಶ್, ಶಬರೀಶ್ ಶೆಟ್ಟಿ, ಪಿ.ಜಿ.ಶೇಖರ್, ರಾಫಿಕ್, ಬಾಲಚಂದ್ರ ನಾಯರ್, ಜಾನಕಿ ವೆಂಕಟೇಶ್, ಔರಂಗಜೇಬ್, ವಿ.ಎಸ್.ಸಾಜಿ ಹಾಗೂ ಜುಲೇಕಾಬಿ ನೇಮಕಗೊಂಡಿದ್ದಾರೆ.

ADVERTISEMENT

ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಹಾಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ಶಿಫಾರಸ್ಸಿನಂತೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಅವರು ಆದೇಶ ಪತ್ರ ನೀಡಿದ್ದಾರೆ ಎಂದು ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.