ADVERTISEMENT

ಕಾಫಿ ತೋಟದಿಂದ ರಸ್ತೆ ದಾಟಿದ ಕಾಡಾನೆ ಹಿಂಡು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 13:13 IST
Last Updated 21 ಏಪ್ರಿಲ್ 2020, 13:13 IST
ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನಲ್ಲಿ ರಸ್ತೆ ದಾಟಿದ ಆನೆಗಳ ಹಿಂಡು
ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನಲ್ಲಿ ರಸ್ತೆ ದಾಟಿದ ಆನೆಗಳ ಹಿಂಡು   

ಮಡಿಕೇರಿ: ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನ ಬಳಿ ಕಾಫಿ ತೋಟವೊಂದರಿಂದ ಬಂದ ಕಾಡಾನೆಗಳ ಹಿಂಡೊಂದು, ರಸ್ತೆ ದಾಟಿ ಮತ್ತೆ ಅರಣ್ಯ ಪ್ರದೇಶಕ್ಕೆ ಸಾಗಿರುವ ವಿಡಿಯೊ ವೈರಲ್‌ ಆಗಿದೆ.

ಅಂದಾಜು 8 ಆನೆಗಳ ಈ ಗುಂಪು ಕಾಫಿ ತೋಟದಿಂದ ಏಕಾಏಕಿ ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ನುಗ್ಗಿದೆ.‌ ಇದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ವಿರಾಜಪೇಟೆ ಹಾಗೂ ಮಾಲ್ದಾರೆ, ಸಿದ್ದಾಪುರ ಸೇರಿದಂತೆ ಹಲವೆಡೆ ಕಾಡಾನೆಗಳ ಹಾವಳಿ ವಿಪರೀತವಾಗಿದೆ‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.