ಗೋಣಿಕೊಪ್ಪಲು: ಇಲ್ಲಿನ ಕಾವೇರಿ ದಸರಾ ಉತ್ಸವದ ಅಂಗವಾಗಿ ಮಂಗಳವಾರ ನಡೆದ ಮಕ್ಕಳ ದಸರಾ ಉತ್ಸವದಲ್ಲಿ ಚಿಣ್ಣರು ವೇಷಭೂಷಣ, ಛದ್ಮವೇಷ, ಕ್ಲೇಮಾಡೆಲಿಂಗ್, ಭರತನಾಟ್ಯ, ಏಕಪಾತ್ರಾಭಿನಯ, ಪೌರಾಣಿಕ ನಾಟಕ, ಸಮೂಹ ಗಾಯನ, ಸಮೂಹ ನೃತ್ಯದ ಮೂಲಕ ಸಂಭ್ರಮಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದ ಚಿಣ್ಣರು, ಮೈದಾನದ ತುಂಬಾ ನಲಿದಾಡಿದರು. ಕೆಲವರು ಇತಿಹಾಸ ಪುರುಷರ ವೇಷ ಧರಿಸಿದರೆ, ಕೆಲ ಮಕ್ಕಳು ಪೌರಾಣಿಕ ಪಾತ್ರಗಳ ವೇಷ ಧರಿಸಿ ಗಮನ ಸೆಳೆದರು.
ಮಕ್ಕಳು ಮಣ್ಣಿನಲ್ಲಿ ವಿವಿಧ ಆಕಾರದ ಚಿತ್ರಗಳನ್ನು ತಯಾರಿಸಿ ತಮ್ಮ ಕಲೆ ಪ್ರದರ್ಶಿಸಿದರು. ಕೆಲವರು ಸಂಗೀತ, ನೃತ್ಯದ ಮೂಲಕ ಪ್ರತಿಭೆ ಅನಾವರಣಗೊಳಿಸಿದರು.
ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಗಣಪತಿ, ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಶೀಲಾ ಬೋಪಣ್ಣ, ಶಿಕ್ಷಕಿ ಓಮನ ಪಾಲ್ಗೊಂಡು ಮಕ್ಕಳ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಕೆಲವು ವಿದ್ಯಾರ್ಥಿಗಳು ಸೈಕಲ್ ರೇಸ್‌ನಲ್ಲಿ ವೇಗವಾಗಿ ಮುನ್ನುಗ್ಗಿ ಪ್ರೇಕ್ಷಕರ ಗಮನ ಸೆಳೆದರು. ಸೋಮವಾರ ರಾತ್ರಿ ನಡೆದ ‘ಗಿಚ್ಚಿಗಿಲಿಗಿಲಿ’, ‘ಬಿಗ್ ಬಾಸ್’ ಖ್ಯಾತಿಯ ತುಕಾಲಿ ಸಂತೋಷ್ ಅವರ ಹಾಸ್ಯ ರಂಜಿಸಿತು. ಮಾತು ಮತ್ತು ನಟನೆಯ ಮೂಲಕ ನಟರು ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.