
ಪ್ರಜಾವಾಣಿ ವಾರ್ತೆ
ಮಡಿಕೇರಿ: ತಾಲ್ಲೂಕಿನ ಮೂರ್ನಾಡು ಗ್ರಾಮದ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಶನಿವಾರ ಚೆಪ್ಪುಡಿರ, ಕುಲ್ಲೇಟಿರ, ಕುಪ್ಪಂಡ ಹಾಗೂ ಪರದಂಡ ತಂಡಗಳು ಗೆಲುವು ಸಾಧಿಸಿದವು.
ಚೆಪ್ಪುಡಿರ ತಂಡವು 9-0 ಗೋಲುಗಳಿಂದ ಮುಕ್ಕಾಟಿರ ತಂಡದ ವಿರುದ್ಧ; ಪರದಂಡ 6-0ರಿಂದ ಕೋಣೇರಿರ ವಿರುದ್ಧ, ಕುಲ್ಲೇಟಿರ 5-0ರಿಂದ ಮಾಚಮಾಡ ವಿರುದ್ಧ ಹಾಗೂ ಕುಪ್ಪಂಡ 3-2ರಿಂದ ಕೂತಂಡ ವಿರುದ್ಧ ಗೆಲುವು ಪಡೆದವು.
ಕೊಡವ ಹಾಕಿ ಅಕಾಡೆಮಿ ವತಿಯಿಂದ ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಈ ಟೂರ್ನಿ ನಡೆಯುತ್ತಿದೆ.