
ಕುಶಾಲನಗರ: ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರಿಗೆ ಆ.31 ರಂದು ಶುಕ್ರವಾರ ಚುನಾವಣೆ ನಡೆಯಲಿದ್ದು, ಚುನಾವಣಾ ಕಾವು ರಂಗೇರಿದೆ.
ಸಂಘದ ಕುಶಾಲನಗರ, ನಂಜರಾಯಪಟ್ಟಣ ಹಾಗೂ ಹೆಬ್ಬಾಲೆ ವಿಭಾಗದಿಂದ ಒಟ್ಟು 12 ನಿರ್ದೇಶಕ ಆಯ್ಕೆ ನಡೆಯಲಿದ್ದು, ಈಗಾಗಲೇ ಸುಂಟಿಕೊಪ್ಪ ವಿಭಾಗದಿಂದ 4 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಂಜರಾಯಪಟ್ಟಣ ಹಾಗೂ ಹೆಬ್ಬಾಲೆ ವಿಭಾಗದಿಂದ 8 ಮಂದಿ ನಿರ್ದೇಶಕರಿಗೆ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ.
ಹೆಬ್ಬಾಲೆ ವಿಭಾಗದಿಂದ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎಂ.ಜಿ.ಕುಮಾರಸ್ವಾಮಿ, ಹಿಂದುಳಿದ ವರ್ಗ(ಬಿಸಿಎಂ ಎ) ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲತ ಅಭ್ಯರ್ಥಿಗಳಾಗಿ ಅಭ್ಯರ್ಥಿ ಎಚ್.ಟಿ.ದಿನೇಶ್ ಮತ್ತು ಬಿಜೆಪಿ ಬೆಂಬಲತ ಅಭ್ಯರ್ಥಿಯಾಗಿ ಎಚ್.ಎನ್.ಮಹಾದೇವ
ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಟಿ.ಎಲ್.ಗಂಗಮ್ಮ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಎಚ್.ಟಿ.ಚಂದ್ರಕಲಾ ಕಣದಲ್ಲಿದ್ದು, ಬಿರುಸಿನ ಮತಯಾಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹೆಬ್ಬಾಲೆ, ತೊರೆನೂರು, ಶಿರಂಗಾಲ ಹಾಗೂ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮತದಾರರ ಮನೆಗಳಿಗೆ ಬೆಂಬಲಿತರೊಂದಿಗೆ ತೆರಳಿ ಮತದಾರರ ಮನವೊಲಿಸುವಲ್ಲಿ ತಲ್ಲೀನರಾಗಿದ್ದಾರೆ.
ಈ ವೇಳೆ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಅರುಣ್ ರಾವ್, ಹೆಗ್ಗಡಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುನೀಲ್ ರಾವ್, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕೆ.ಎಸ್.ಕೃಷ್ಣೇಗೌಡ, ಮೂರ್ತಿ ಅಳುವಾರ,ಮುಖಂಡರಾದ ಎಚ್.ಪಿ.ಮಂಜುನಾಥ್ ಹಳಗೋಟೆ, ಟಿ.ಜಿ.ಲೋಕೇಶ್ ತೊರೆನೂರು,
ರವಿಚಂದ್ರ, ಪ್ರದೀಪ್ ರೆಡ್ಡಿ, ಚಿಂದಂಬರ್, ಅನಿಲ್, ರಂಗ, ಮಲ್ಲೇಶ್,ಮೂರ್ತಿ, ವೀರಭದ್ರ, ಹರ್ಷ, ಮಧುಸೂದನ್, ಮಂಜುನಾಥ್, ಶಿವಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.