
ಕುಶಾಲನಗರ: ಇಲ್ಲಿನ ಎಪಿಸಿಎಂಎಸ್ಸಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಎಂ.ಎನ್.ಕೊಮಾರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ನೂರಾರು ಮಂದಿ ಸ್ಥಳೀಯರು, ಅಭಿಮಾನಿಗಳು ಆಗಮಿಸಿ ಕುಮಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸಾಮಾಜಿಕ, ರಾಜಕೀಯ ಹಾಗೂ ಸಹಕಾರ ರಂಗದಲ್ಲಿ ಅತ್ಯಂತ ಪ್ರಾಮಾಣಿಕತೆಯ ಮೂಲಕ ಎಪಿಸಿಎಂಎಸ್ ಸಹಕಾರ ಸಂಸ್ಥೆಗಳನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿದ ಹಿರಿಯ ಚೇತನಾ ಕೊಮಾರಪ್ಪ ಅವರ ಸಹಕಾರ ಕ್ಷೇತ್ರದಲ್ಲಿನ ಆದರ್ಶಮಯ ಆಡಳಿತ ಇತರೇ ಎಲ್ಲಾ ಸಹಕಾರಿಗಳಿಗೆ ಮಾದರಿಯಾಗಿದೆ' ಎಂದು ಹೇಳಿದರು.
ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್ ಮಾತನಾಡಿ, ಪಟ್ಟಣದಲ್ಲಿ ರೈತ ಸಹಕಾರ ಭವನವನ್ನು ಅತ್ಯಂತ ಯೋಜನಾ ಬದ್ಧವಾಗಿ ರೂಪಿಸಿದ ಕೊಮಾರಪ್ಪ ಕುಶಾಲನಗರದ ಅಭಿವೃದ್ದಿಗೆ ತಮ್ಮದೇ ಆದ ರೀತಿಯಲ್ಲಿ ಕನಸು ಕಟ್ಟಿದ್ದರು’ ಎಂದು ನೆನಪಿಸಿಕೊಂಡರು.
ನಗರದ ಹಿರಿಯರಾದ ವಿ.ಎನ್.ವಸಂತ ಕುಮಾರ್ ಮಾತನಾಡಿ, ಎಪಿಸಿಎಂಎಸ್ ಸಂಸ್ಥೆಯನ್ನು ಮಾದರಿ ಸಂಸ್ಥೆಯಾಗಿ ರೂಪಿಸುವಲ್ಲಿ ಕೊಮಾರಪ್ಪ ಅವರ ಶ್ರಮ ಅಪಾರ’ ಎಂದರು.
ಮುಖಂಡರಾದ ಜಿ.ಎಲ್.ನಾಗರಾಜು, ಎಪಿಸಿಎಂಎಸ್ ನಿರ್ದೇಶಕಿ ಬಿ.ಎಂ.ಪಾರ್ವತಿ, ವಕೀಲ ಆರ್.ಕೆ.ನಾಗೇಂದ್ರ, ಸಹಕಾರಿಗಳಾದ ಕೆ.ಪಿ.ಚಂದ್ರಕಲಾ, ಎಂ.ವಿ.ನಾರಾಯಣ ಮಾತನಾಡಿದರು.
ಕುಶಾಲನಗರ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ನಾಗೇಶ್, ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ, ಒಕ್ಕಲಿಗ ಸಮಾಜದ ಅಧ್ಯಕ್ಷ ಎಂ.ಕೆ.ದಿನೇಶ್, ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ, ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕಾವೇರಿ ನದಿ ಸಂರಕ್ಷಣಾ ಆಂದೋಲನದ ಸಂಚಾಲಕ ಎಂ.ಎನ್.ಚಂದ್ರಮೋಹನ್, ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕೇರಳ ಸಮಾಜದ ನಿರ್ದೇಶಕ ಕೆ.ವರದ, ಪುರಸಭಾ ಮಾಜಿ ಅಧ್ಯಕ್ಷ ಜೈವರ್ಧನ, ಬಿ.ಅಮೃತರಾಜು, ಮಾಜಿ ಸದಸ್ಯ ಜಗದೀಶ್, ಪ್ರಮುಖರಾದ ಕೆ.ಜಿ.ಮನು, ವಿ.ಸಿ.ಅಮೃತ್, ಕೆ.ಎಸ್.ಕೃಷ್ಣೇಗೌಡ,
ಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಉಪಾಧ್ಯಕ್ಷೆ ಚಂದ್ರಕಲಾ, ನಿರ್ದೇಶಕ ಶರತ್, ಮಾಜಿ ಸದಸ್ಯರಾದ ಕೆ.ಎಸ್.ರತೀಶ್, ಆರ್.ಕೆ.ಚಂದ್ರು, ಸುಂಟಿಕೊಪ್ಪ ಕೆ.ಎಸ್.ಮಂಜುನಾಥ್, ಕ್ಲೈವ ಪೊನ್ನಪ್ಪ, ಏಳನೇ ಹೊಸಕೋಟೆ ರಮೇಶ್, ಪುಂಡರೀಕಾಕ್ಷ, ಸಿ.ವಿ.ನಾಗೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.