ADVERTISEMENT

ಕುಶಾಲನಗರ|ಪುಲ್ವಾಮಾ ಹುತಾತ್ಮ ಸೈನಿಕರಿಗೆ ನಮನ:ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:03 IST
Last Updated 15 ಫೆಬ್ರುವರಿ 2026, 3:03 IST
ಕುಶಾಲನಗರದಲ್ಲಿ ಅರೆಸೇನಾಪಡೆ ಮಾಜಿ ಯೋಧರ ಒಕ್ಕೂಟದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುಲ್ವಾಮಾ ಹುತಾತ್ಮ ಸೈನಿಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ಕುಶಾಲನಗರದಲ್ಲಿ ಅರೆಸೇನಾಪಡೆ ಮಾಜಿ ಯೋಧರ ಒಕ್ಕೂಟದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುಲ್ವಾಮಾ ಹುತಾತ್ಮ ಸೈನಿಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ಕುಶಾಲನಗರ: ಕೊಡಗು ಜಿಲ್ಲಾ ಅರೆಸೇನಾಪಡೆಯ ಮಾಜಿ ಯೋಧರ ಒಕ್ಕೂಟದಿಂದ ಪುಲ್ವಾಮದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಲ್ಲಿನ ಎಪಿಸಿಎಂಎಸ್‌ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಧರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.

ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಪುಲ್ವಾಮದ ಘಟನೆಯಲ್ಲಿ ಮೃತ ವೀರ ಸೇನಾನಿಗಳ ಕುಟುಂಬದೊಂದಿಗೆ ಅಖಂಡ ದೇಶವಾಸಿಗಳು ಇದ್ದಾರೆ ಎಂದರು.

ADVERTISEMENT

ದೇಶದ ಸೈನಿಕರು ಪುಲ್ವಾಮಾ ನಂತರ ತಕ್ಕಪಾಠ ಕಲಿಸುವ ಮೂಲಕ 250 ಮಂದಿ ಉಗ್ರರನ್ನು ಸದೆ ಬಡಿಯಲಾಯಿತು. ಭಾರತೀಯ ಸೈನಿಕರ ಪರಾಕ್ರಮ ತೋರಿಸುವ ಮೂಲಕ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯ ಘಂಟೆ ಮೊಳಗಿಸಿದರು ಎಂದರು.

ತಾಲ್ಲೂಕಿನ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದೇಶದ ಭದ್ರತೆ ಹಾಗೂ ಸುರಕ್ಷತೆಯ ವಿಚಾರದಲ್ಲಿ ದೇಶದ ಗಡಿ ಕಾಯುವ ಸೈನಿಕರ ಸೇವೆ ಹಾಗೂ ತ್ಯಾಗ ಅನನ್ಯವಾದುದು. ಹುತಾತ್ಮ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮ ಸಾರ್ವಜನಿಕರಿಂದ ನಡೆಯುವಂತಾಗಬೇಕು ಎಂದು ತಿಳಿಸಿದರು.

ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ದೇಶ ಸೇವೆಗಾಗಿ ಆಯಸ್ಸು ಹಾಗೂ ಭವಿಷ್ಯ ಪಣಕ್ಕಿಡುವ ಯೋಧರ ಸೇವೆ ಬೆಲೆ ಕಟ್ಟಲಾಗದು ಎಂದರು.

ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಮಾತನಾಡಿ, ದೇಶ ಸೇವೆಯಲ್ಲಿ ಕೃಷಿಕ, ಸೈನಿಕ ಹಾಗೂ ಶಿಕ್ಷಕನ ಪಾತ್ರ ಅಪಾರ ಎಂದರು.

ಹಿರಿಯ ನಾಗರಿಕ ಎಂ.ಎಚ್.ನಜೀರ್ ಅಹಮದ್, ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ಕಾಫಿ ಮಂಡಳಿ ಮಾಜಿ ಸದಸ್ಯ ಜಿ.ಎಲ್.ನಾಗರಾಜು, ಕೊಡಗು ಜಿಲ್ಲಾ ಅರೆಸೇನಾಪಡೆಯ ಮಾಜಿ ಯೋಧರ ಅಧ್ಯಕ್ಷತೆ ಎಂ.ಜಿ.ಯತೀಶ್, ಉಪಾಧ್ಯಕ್ಷ ಪುಲಿಯಂಡ ಚೆಂಗಪ್ಪ, ಕಾರ್ಯದರ್ಶಿಗಳಾದ ಎಂ.ಎನ್.ರವೀಂದ್ರ, ಬಿ.ಎನ್.ರಾಜಶೇಖರ, ಸಂಚಾಲಕ ನೂರೇರಾ ಭೀಮಯ್ಯ, ಜಿ.ಕೆ.ದಿನೇಶಕುಮಾರ್, ಪುಟ್ಟೇಗೌಡ, ಹರೀಶ್ ಕುಮಾರ್ ಗೌಡ, ಮಹೇಶ್ ಅಮೀನ್, ದಲಿತ ಸಂಘರ್ಷ ಸಮಿತಿಯ ಮುಖಂಡ ಕೆ.ಬಿ.ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.