ಸಿದ್ದಾಪುರ: ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸಿದ್ದಾಪುರ ಸುತ್ತಲಿನ ವಿವಿಧ ವಾರ್ಡ್‌ಗಳ ಮನೆಗಳಿಗೆ ತೆರಳಿ ಸೊಳ್ಳೆ, ಲಾರ್ವ ಸಮೀಕ್ಷೆ ನಡೆಸಿದರು. ಡೆಂಗಿ ಜ್ವರ ತಡೆ ಜಾಗೃತಿ ಮೂಡಿಸಿದರು.
ಸಿದ್ದಾಪುರ, ಕರಡಿಗೋಡು, ಗುಹ್ಯ, ಪುಲಿಯೇರಿ ಹಾಗೂ ಮಾಲ್ದಾರೆ ವ್ಯಾಪ್ತಿಯಲ್ಲಿ ಲಾರ್ವ ಸಮೀಕ್ಷೆ ಮಾಡಲಾಯಿತು. ಜನರಿಗೆ ಡೆಂಗಿ, ಮಲೇರಿಯಾ ಜ್ವರಗಳು ಹರಡುವ ವಿಧಾನ, ಎಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಡೆಂಗಿ ಜ್ವರವನ್ನು ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಡಾ.ಶಾರೂಕ್ ಫಹದ್, ಮಾಯಮ್ಮ, ಚೈತನ್ಯ, ವೀರೇಶ್, ಶಿವಾನಂದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.