ADVERTISEMENT

ಹಾಕಿಯಂತೆ ಹಗ್ಗಜಗ್ಗಾಟವೂ ದಾಖಲೆ ಮಾಡಲಿ: ಶಾಸಕ ಎ.ಎಸ್.ಪೊನ್ನಣ್ಣ

ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆಯ ಲೊಗೊ ಬಿಡುಗಡೆ ಮಾಡಿದ ಶಾಸಕ ಎ.ಎಸ್.ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:44 IST
Last Updated 6 ಡಿಸೆಂಬರ್ 2025, 6:44 IST
ನಾಪೋಕ್ಲು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆ- 2026 ರ ಲೊಗೊ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ನೆರವೇರಿಸಿದರು..
ನಾಪೋಕ್ಲು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆ- 2026 ರ ಲೊಗೊ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ನೆರವೇರಿಸಿದರು..   

ನಾಪೋಕ್ಲು: ಕೊಡವ ಕುಟುಂಬಗಳಲ್ಲಿ ಕ್ರೀಡಾ ಸ್ಪೂರ್ತಿ ಏರು ಗತಿಯಲ್ಲಿದ್ದು, ವರ್ಷದಿಂದ ವರ್ಷಕ್ಕೆ ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳು ಕೊಡಗಿನಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.

ಇಲ್ಲಿನ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಶುಕ್ರವಾರ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆ- 2026 ರ ಚಿಹ್ನೆ(ಲೋಗೊ) ಬಿಡುಗಡೆಗೊಳಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕೊಡಗಿನಲ್ಲಿ ಹಾಕಿ ಕ್ರೀಡೆ ಗಿನ್ನೆಸ್ ದಾಖಲೆ ಮಾಡಿದೆ. ಅದರಂತೆ, ಹಗ್ಗಜಗ್ಗಾಟ ಕ್ರೀಡೆಯು ಕೂಡ ದಾಖಲೆ ಮಾಡುವಂತಾಗಲಿ. ಇದಕ್ಕೆ ವಿವಿಧ ಕುಟುಂಬಸ್ಥರು ನಡೆಸುವ ಪ್ರಾಮಾಣಿಕ ಪ್ರಯತ್ನ ಫಲ ನೀಡಲಿದೆ. ಚೀಯಕಪೂವಂಡ ಕುಟುಂಬದ ಜೊತೆ ನನಗೆ ಅವಿನಭಾವ ಸಂಬಂಧವಿದ್ದು ತನ್ನ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ‘ಪಂಜಾಬ್ ಬಿಟ್ಟರೆ ಕೊಡಗು ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಕೊಡವ ಕುಟುಂಬಗಳ ನಡುವಿನ ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಕ್ರೀಡೆಗಳು ಜನಪ್ರಿಯ. ಕ್ರೀಡೆಯಿಂದ ಮನಶಾಂತಿ, ಆರೋಗ್ಯ ಲಭಿಸುತ್ತದೆ’ ಎಂದು ಹೇಳಿದರು. ಜೊತೆಗೆ, ಕೊಡಗಿನ ಮಣ್ಣು, ನೀರು, ಗಾಳಿ, ಪರಿಸರ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ಕೊಡಗಿನ ಕ್ರೀಡೆ ಹಾಗೂ ಆಚಾರ, ವಿಚಾರಗಳು ವಿಭಿನ್ನವಾಗಿವೆ. ಇತರರನ್ನು ಗೌರವಿಸುವುದು ಇಲ್ಲಿನ ಜನರ ಗುಣವಾಗಿದೆ. ಇಲ್ಲಿಯ ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯ ಶ್ರೀಮಂತವಾಗಿದೆ’ ಎಂದರು.

ಸ್ಥಳೀಯ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ.ಸಿ ನಾಣಯ್ಯ ಮಾತನಾಡಿ, ಹಗ್ಗ ಜಗ್ಗಾಟ ಒಂದು ಪ್ರಾಚೀನ ಕಲೆಯಾಗಿದ್ದು ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿತ್ತು. ನಂತರ, ಇದನ್ನು ಕ್ರೀಡೆಯಾಗಿ ಪರಿಗಣಿಸಲಾಯಿತು. 20 ವರ್ಷಗಳ ಕಾಲ ಒಲಂಪಿಕ್ಸ್‌ನಲ್ಲಿ ಸ್ಪರ್ಧೆಯಾಗಿ ಜನಪ್ರಿಯವಾಗಿತ್ತು’ ಎಂದರು.

ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಮಾತನಾಡಿ, ‘ಕೊಡವ ಟಗ್ ಆಫ್ ವಾರ್ ಕ್ರೀಡೆಯ ಪ್ರಾರಂಭದಿಂದ ಇಲ್ಲಿಯವರೆಗೆ ಆಯೋಜಿಸಿದ ಕ್ರೀಡಾಕೂಟದ ಅಂಕೆ ಸಂಖ್ಯೆಗಳ ಒಳಗೊಂಡ ಮಾಹಿತಿ ನೀಡಿ ಮುಂದೆ ನಡೆಯುವ ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರು ಅಲ್ಲದೆ 14 ವರ್ಷದ ಮಕ್ಕಳಿಗೂ ಅವಕಾಶ ನೀಡಲಾಗುವುದು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಅಧ್ಯಕ್ಷ ಕೆ ಬೋಪಣ್ಣ ವಹಿಸಿದ್ದರು. ಚೀಯಕಪೂವಂಡ ಕುಟುಂಬ ಸಮಿತಿಯ ಅಧ್ಯಕ್ಷ ಚೀಯಕಪೂವಂಡ ಎಂ.ಅಪ್ಪಚ್ಚು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು. ಸಮಿತಿ ಉಪಾಧ್ಯಕ್ಷ ಕಟ್ಟಿ ಮಂಜುನಾಥ್, ಕಾರ್ಯದರ್ಶಿ ಸಿ.ಎ.ನಾಚಪ್ಪ, ಜಂಟಿ ಕಾರ್ಯದರ್ಶಿ ಸಚಿನ್ ಮುತ್ತಪ್ಪ, ಖಜಾಂಚಿ ಸತೀಶ್ ದೇವಯ್ಯ , ಟೂರ್ನಮೆಂಟ್ ಡೈರೆಕ್ಟರ್ ಸಿ.ಡಿ.ನವೀನ್, ನಿರ್ದೇಶಕರಾದ ಪ್ರಕಾಶ್ ಮಂದಪ್ಪ, ಸುನಿಲ್ ಮಾಚಯ್ಯ, ಸಚಿನ್ ಪೂವಯ್ಯ, ಪಾಲ್ಗೊಂಡಿದ್ದರು.

ನಾಪೋಕ್ಲು ಕೊಡವ ಸಮಾಜದ  ಹರದಾಸ ಅಪ್ಪನೆರವಂಡ  ಅಪ್ಪಚ್ಚ ಕವಿ ಸಭಾಂಗಣದಲ್ಲಿ ಕೊಡವ ಟಗ್ ಆಫ್ ವಾರ್  ಅಕಾಡೆಮಿಯ ಮಾನ್ಯತೆ ಪಡೆದ ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆ- 2026 ರ ಲೊಗೊವನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.