ADVERTISEMENT

ಮಡಿಕೇರಿ: ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ

ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 4:15 IST
Last Updated 26 ಏಪ್ರಿಲ್ 2024, 4:15 IST
ಮಡಿಕೇರಿ ಸಂತ ಜೋಸೆಫರ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಮಸ್ಟರಿಂಗ್ ವೇಳೆ ಮತದಾನದ ಪರಿಕರಗಳನ್ನು ತೆಗೆದುಕೊಂಡ ಚುನಾವಣಾ ಸಿಬ್ಬಂದ ಪರಸ್ಪರ ಕುಶಲೋಪರಿ ವಿಚಾರಿಸಿಕೊಳ್ಳುತ್ತಾ ತಮ್ಮ ತಮ್ಮ ಮತಗಟ್ಟೆ ಹೊರಟರು
ಮಡಿಕೇರಿ ಸಂತ ಜೋಸೆಫರ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಮಸ್ಟರಿಂಗ್ ವೇಳೆ ಮತದಾನದ ಪರಿಕರಗಳನ್ನು ತೆಗೆದುಕೊಂಡ ಚುನಾವಣಾ ಸಿಬ್ಬಂದ ಪರಸ್ಪರ ಕುಶಲೋಪರಿ ವಿಚಾರಿಸಿಕೊಳ್ಳುತ್ತಾ ತಮ್ಮ ತಮ್ಮ ಮತಗಟ್ಟೆ ಹೊರಟರು   

ಮಡಿಕೇರಿ: ನಗರದ ಸಂತ ಜೋಸೆಫರ್ ಶಿಕ್ಷಣ ಸಂಸ್ಥೆಯಿಂದ ಹಾಗೂ ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಿಂದ ವಿದ್ಯುನ್ಮಾನ ಮತಯಂತ್ರಗಳು, ಅಳಿಸಲಾಗದ ಶಾಯಿ ಸೇರಿದಂತೆ ಚುನಾವಣೆಗೆ ಬೇಕಾದ ಪರಿಕರಗಳನ್ನು ಹೊತ್ತು ಚುನಾವಣಾ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗಳಿಗೆ ಗುರುವಾರ ತೆರಳಿದರು.

ಬೆಳಿಗ್ಗೆ 7 ಗಂಟೆಯಿಂದಲೇ ಇಲ್ಲಿ ಚುನಾವಣಾ ಸಿಬ್ಬಂದಿ ಸೇರಲಾರಂಭಿಸಿದರು. ಯಾರು ಯಾವ ಮತಗಟ್ಟೆ ಎಂಬುದು ಇಲ್ಲಿಗೆ ಬಂದ ನಂತರವೇ ಸಿಬ್ಬಂದಿಗೆ ತಿಳಿಯಿತು. ಸಮೀಪದ ಮತಗಟ್ಟೆಗಳನ್ನು ಪಡೆದ ಸಿಬ್ಬಂದಿ ಹರ್ಷಚಿತ್ತರಾದರೆ, ಬಹುದೂರದ ಮತಗಟ್ಟೆಗಳನ್ನು ಪಡೆದವರೂ ಉತ್ಸಾಹದಲ್ಲೇ ತೆರಳಿದ್ದು ವಿಶೇಷ ಎನಿಸಿತು.

ಇವರಿಗಾಗಿ ಜಿಲ್ಲಾಡಳಿತ 214 ವಾಹನಗಳನ್ನು ಪ್ರಯಾಣಕ್ಕಾಗಿ ನಿಯೋಜಿಸಿತ್ತು. ಅವುಗಳಲ್ಲಿ 80 ಕೆಎಸ್‌ಆರ್‌ಟಿಸಿ ಬಸ್‌ಗಳು, 47 ಮಿನಿಬಸ್‌ಗಳು, 74 ಜೀಪುಗಳು ಹಾಗೂ 13 ಮ್ಯಾಕ್ಸಿಕ್ಯಾಬ್‌ಗಳು ಸೇರಿದ್ದವು.

ADVERTISEMENT

ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 273 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ಒಟ್ಟು 1,208 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಿಆರ್‌ಒ 302, ಎಪಿಆರ್‌ಒ 302, ಪಿ.ಒ 604 ಮಂದಿ ಇದ್ದಾರೆ.

ಮಡಿಕೇರಿಯ ಸಂತ ಜೋಸೆಫರ ಮತಗಟ್ಟೆ, ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮತಗಟ್ಟೆಗಳೇ ಅತಿ ಸಮೀಪದ ಮತಗಟ್ಟೆಗಳು ಎನಿಸಿದರೆ, ಮಡಿಕೇರಿ ತಾಲ್ಲೂಕಿನ ಮುನ್ರೋಟ್‌ ಹಾಗೂ ಕಡಮಕಲ್ಲು ಮತಗಟ್ಟೆಗಳು ಅತಿ ದೂರದ ಮತಗಟ್ಟೆಗಳು ಎನಿಸಿವೆ.

ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಸಿಕ್ಕಿದ ತಮ್ಮ ಸ್ನೇಹಿತರೊಂದಿಗೆ ನೀವು ಎಲ್ಲಿಗೆ? ಎಂದು ಉಭಯಕುಶಲೋಪರಿ ಮಾತುಗಳನ್ನಾಡುತ್ತಿದ್ದ ದೃಶ್ಯಗಳು ಸಾಮಾನ್ಯ ಎನಿಸಿತ್ತು. ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ಸಿಬ್ಬಂದಿಗೆ ಹೇಳುತ್ತಿದ್ದರು.

ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಗುರುವಾರ ನಡೆದ ಮಸ್ಟರಿಂಗ್ ಕಾರ್ಯದ ವೇಳೆ ಚುನಾವಣಾ ಸಿಬ್ಬಂದಿ ಚುನಾವಣಾ ಪರಿಕರಗಳನ್ನು ತೆಗೆದುಕೊಂಡು ತಮ್ಮ ತಮ್ಮ ಮತಗಟ್ಟೆಗಳ ಕಡೆಗೆ ಹೊರಟರು
ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಗುರುವಾರ ನಡೆದ ಮಸ್ಟರಿಂಗ್ ಕಾರ್ಯದ ವೇಳೆ ಚುನಾವಣಾ ಸಿಬ್ಬಂದಿ ತಮಗೆ ಸಿಕ್ಕಿರುವ ಮತಗಟ್ಟೆಗಳ ಮಾಹಿತಿಯನ್ನು ಗುಂಪುಗೂಡಿ ವೀಕ್ಷಿಸಿದರು

ಇಂದು ನಡೆಯಲಿದೆ ಮತದಾನ ಮತದಾನದ ಪರಿಕರಗಳನ್ನು ಹೊತ್ತು ನಡೆದ ಸಿಬ್ಬಂದಿ ಸಾವಿರಾರು ಸಿಬ್ಬಂದಿ ನಿಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.