ADVERTISEMENT

ಎಫ್‌ಡಿಎ ಮಹಮ್ಮದ್ ಬಷೀರ್ ಬಳಿ ಅಪಾರ ನಗದು, ಅರ್ಧ ಕೆ.ಜಿ. ಚಿನ್ನಾಭರಣ

ಮಡಿಕೇರಿ ‌ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ಅವರ ನೇತೃತ್ವದಲ್ಲಿ ಈ ದಾಳಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 6:49 IST
Last Updated 28 ಜೂನ್ 2023, 6:49 IST
   

ಮಡಿಕೇರಿ: ಕೊಡಗು ಜಿಲ್ಲಾ ‍ಪಂಚಾಯಿತಿಯ ಕುಡಿಯುವ ನೀರು‌ ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಲೆಕ್ಕ ಸಹಾಯಕ (ಎಫ್‌ಡಿಎ) ಪಿ.ಎಂ.ಅಬ್ದುಲ್ ಬಷೀರ್ ಅವರ ಕುಶಾಲನಗರದ ಗೊಂದಿಬಸವನಹಳ್ಳಿ ಮನೆ, ಅವರ ಸೋದರ ಮಹಮ್ಮದ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ ಪತ್ತೆ ಹಚ್ಚಿದ್ದಾರೆ.

ಅಬ್ದುಲ್ ಬಷೀರ್ ಮನೆಯಲ್ಲಿ ₹14 ಲಕ್ಷ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ ₹ 23 ಲಕ್ಷ ಹಣ, ಮನೆಯಲ್ಲಿ ಅರ್ಧ ಕೆ.ಜಿ ಚಿನ್ನ, 2 ನಿವೇಶನ, ಒಂದು ಮನೆಯ ದಾಖಲೆ ಹಾಗೂ 2 ಕಾರುಗಳನ್ನು ಲೋಕಾಯುಕ್ತ ಪೊಲೀಸರ ತಂಡ ಪತ್ತೆ ಮಾಡಿದೆ. ಒಟ್ಟು ಆಸ್ತಿ ಮೌಲ್ಯ ₹ 1.4 ಕೋಟಿ ಎಂದು ಅಂದಾಜು ಮಾಡಲಾಗಿದೆ.

‘ಅವರ ಸಹೋದರ ಮಹಮ್ಮದ್ ಅವರ ನಾಪೋಕ್ಲುವಿನ ನಿವಾಸ ಹಾಗೂ ಅಬ್ದುಲ್ ಬಷೀರ್ ಅವರ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲಾಯಿತಾದರೂ, ಅಲ್ಲೇನೂ ಸಿಗಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.