ನಾಪೋಕ್ಲು: ಇಲ್ಲಿಯ ಸುನ್ನಿ ಮುಹಿದ್ದೀನ್ ಜುಮಾ ಮಸೀದಿ ವತಿಯಿಂದ ಆಯೋಜಿಸಲಾಗಿರುವ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ಕಾರ್ಯಕ್ರಮದ ಧ್ವಜಾರೋಹಣವನ್ನು ಶುಕ್ರವಾರ ಮಸೀದಿ ಆವರಣದಲ್ಲಿ ನೆರವೇರಿಸಲಾಯಿತು.
ಜುಮುಅ ನಮಾಜ್ ಬಳಿಕ ಜಮಾಯತ್ ಅಧ್ಯಕ್ಷ ಎಂ.ಎಚ್ ಅಬ್ದುಲ್ ರೆಹಮಾನ್ ಧ್ವಜಾರೋಹಣವನ್ನು ನೆರವೇರಿಸಿದರು.
ಮುಖಂಡರಾದ ಕೆ.ಎ.ಇಸ್ಮಾಯಿಲ್, ಪಿ.ಎ.ಮನ್ಸೂರ್ ಆಲಿ, ಪಿ.ಎಂ.ಯುನಸ್, ಪಿ.ಎಂ.ಅಬ್ದುಲ್ ಅಜೀಜ್, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಸಲೀಂ ಹ್ಯಾರಿಸ್, ಶಂಷು ಕಾರೆಕಾಡು, ಪಿ.ಎಂ.ಅರಫತ್, ಹುಸೇನಾರ್ ತಿರೋವತ್, ಸಿ.ಎಚ್.ಹಮೀದ್, ಜಬ್ಬರ್, ಆಸಿಫ್ ಆಲಿ, ಫಾರೂಕ್, ನೌಫಲ್, ಎಂ.ಎಂ.ಅಬೂಬಕರ್, ಅಶ್ರಫ್ ಅಲಿ, ಪಿ.ಎಂ.ಬಜರುದ್ದೀನ್ ಮಾತನಾಡಿದರು.
ಮೌಲಿದ್ ಬುರ್ದು, ದಫ್ ಮತ್ತು ಧಾರ್ಮಿಕ ಪ್ರಭಾಷಣ ಸಮಾರಂಭ ಮಿಲಾದ್ ಸಮಿತಿಯ ಅಧ್ಯಕ್ಷ ಪಿ.ಎಂ.ಅರಫತ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಖತೀಬ್ ಖಲೀಲ್ ಸಖಾಫಿ ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಭಾಷಣವನ್ನು ಖತೀಬರಾದ ಹಾಫಿಳ್ ಶೌಕತಲಿ ಸಖಾಫಿ ನೆರವೇರಿಸಿದರು. ದುಅ ಮಜ್ಜೀಸ್ ನೇತೃತ್ವವನ್ನು ಸೈಯದ್ ಶಿಹಾಬುದ್ದೀನ್ ಅಲ್ ಅಹ್ಹಲ್ ಮುತನೂರ್ ತಂಗಳ್ ವಹಿಸಿದ್ದರು. ಶನಿವಾರ ಜಮಾಯತ್ ಅಧ್ಯಕ್ಷ ಎಂ.ಎಚ್ ಅಬ್ದುಲ್ ರಹಮಾನ್ ಅವರ ಅಧ್ಯಕ್ಷತೆಯಲ್ಲಿ ಮದರಸ ಮಕ್ಕಳ ಸಾಂಸ್ಕೃತಿಕ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದವು. ಭಾನುವಾರ ಸರ್ವ ಧರ್ಮ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.