ಮಡಿಕೇರಿ: ಇಲ್ಲಿನ ಗೌಡ ಸಮಾಜದ ಸಭಾಂಗಣದಲ್ಲಿ ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್‌ನ ನೂತನ ಅಧ್ಯಕ್ಷರಾಗಿ ಪೊನ್ನಚ್ಚನ ಮಧುಸೂದನ್ ಮತ್ತು ಕಾರ್ಯದರ್ಶಿಯಾಗಿ ಕಟ್ಟೆಮನೆ ಸೋನಜಿತ್ ಅವರು ಪದಗ್ರಹಣ ಮಾಡಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ‘65 ಸದಸ್ಯ ಬಲದ ಮಿಸ್ಟಿ ಹಿಲ್ಸ್ 19 ವರ್ಷಗಳಲ್ಲಿ ಸೇವಾಸಾಧನೆಗಾಗಿ ಖ್ಯಾತವಾಗಿದ್ದು ಮತ್ತಷ್ಟು ನೂತನ ಯೋಜನೆಗಳ ಮೂಲಕ ಈ ಸೇವಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲಾಗುವುದು’ ಎಂದು ಭರವಸೆ ನೀಡಿದರು.
ಮೈಸೂರಿನ ಉದ್ಯಮಿ ಯಶಸ್ವಿ ಸೋಮಶೇಖರ್ ಮಾತನಾಡಿ, ‘ರೋಟರಿಯ ಸಾಮಾಜಿಕ ಹೊಣೆಯನ್ನು ಅತ್ಯಂತ ಯಶಸ್ವಿಯಾಗಿ ಮುಂದುವರೆಸುವ ಮಹತ್ವದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲಿದೆ’ ಎಂದು ಹೇಳಿದರು.
ರೋಟರಿ ಸಹಾಯಕ ಗವರ್ನರ್ ದೇವಣಿರ ಕಿರಣ್ ಮತ್ತು ವಲಯ ಸೇನಾನಿ ಅನಿತಾ ಪೂವಯ್ಯ, ಈ ವರ್ಷದ ರೋಟರಿಯ ಸೇವಾ ಯೋಜನೆಗಳ ಮಾಹಿತಿ ನೀಡಿದರು. ಎಸ್.ಎಂ.ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ‘ರೋಟೋ ಮಿಸ್ಟ್’ ವಾರ್ತಾಸಂಚಿಕೆಯನ್ನೂ ಈ ವೇಳೆ ಬಿಡುಗಡೆ ಮಾಡಲಾಯಿತು.
ರೋಟರಿ ಸಂಸ್ಥೆಗೆ ಮೇಜರ್ ಡೋನರ್ ಆದ ಮಿಸ್ಟಿ ಹಿಲ್ಸ್ ನಿರ್ದೇಶಕ ಡಾ.ಚೆರಿಯಮನೆ ಪ್ರಶಾಂತ್ ಅವರನ್ನು ಗೌರವಿಸಲಾಯಿತು. ನೂತನ ಸದಸ್ಯರಾಗಿ ಮನೋಜ್ ಕುಮಾರ್ ಅವರನ್ನು ಸೇರ್ಪಡೆಗೊಳಿಸಲಾಯಿತು.
ಮಿಸ್ಟಿ ಹಿಲ್ಸ್‌ನ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದಶಿ೯ ರತ್ನಾಕರ್ ರೈ, ರೋಟರಿ ಜಿಲ್ಲೆ 3181 ರ ಮಾಜಿ ಗವರ್ನರ್‌ಗಳಾದ ರವೀಂದ್ರಭಟ್, ಸುರೇಶ್ ಚಂಗಪ್ಪ, ಡಾ.ರವಿ ಅಪ್ಪಾಜಿ, ನಿಯೋಜಿತ ಗವರ್ನರ್ ಸತೀಶ್ ಬೋಳಾರ್, ಮುಖಂಡರಾದ ಬಿ.ಜಿ.ಅನಂತಶಯನ, ಎಚ್.ಟಿ.ಅನಿಲ್, ಬಿ.ಕೆ.ರವೀಂದ್ರರೈ, ಕಪಿಲ್ ಕುಮಾರ್, ಕೆ.ಎಂ.ಪೂಣಚ್ಚ, ಲೀನಾ ಪೂವಯ್ಯ, ಕಟ್ಟೆಮನೆ ಸೋನಜಿತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.