ADVERTISEMENT

ಮಡಿಕೇರಿ ದಸರೆ | ಕಾರ್ಯಕ್ರಮಗಳು ವಿಳಂಬ

ಮಡಿಕೇರಿ, ಗೋಣಿಕೊಪ್ಪಲು ದಸರೆಯಲ್ಲಿ ಆಗಬೇಕಿದೆ ಮತ್ತಷ್ಟು ಸುಧಾರಣೆ

ಕೆ.ಎಸ್.ಗಿರೀಶ್
Published 24 ಸೆಪ್ಟೆಂಬರ್ 2025, 5:01 IST
Last Updated 24 ಸೆಪ್ಟೆಂಬರ್ 2025, 5:01 IST
ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭದ ದಿನವಾದ ಮಂಗಳವಾರ ಗಾಂಧಿ ಮೈದಾನ ಪ್ರೇಕ್ಷಕರಿಲ್ಲದೇ ಬಣಗುಡುತ್ತಿತ್ತು.
ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭದ ದಿನವಾದ ಮಂಗಳವಾರ ಗಾಂಧಿ ಮೈದಾನ ಪ್ರೇಕ್ಷಕರಿಲ್ಲದೇ ಬಣಗುಡುತ್ತಿತ್ತು.   

ಮಡಿಕೇರಿ: ಮಡಿಕೇರಿ ದಸರೆಯ ಆಕರ್ಷಣೆಗಳಲ್ಲಿ ಒಂದಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಯ ಪಾಲನೆ ಎಂಬುದು ಮರೀಚಿಕೆಯಾಗಿದ್ದು, ಈ ಇತಿಹಾಸ ಈಗಲೂ ಮುಂದುವರಿದಿದೆ.

ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಪ್ರಸಕ್ತ ಸಾಲಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಗೋಣಿಕೊಪ್ಪಲಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ತಡವಾಗಿ ಪ್ರೇಕ್ಷಕರಿಗೆ ಅಸಮಾಧಾನ ತರಿಸಿತು. ದೂರದ ಊರುಗಳಿಂದ ಬಂದಿದ್ದ ಕಲಾವಿದರೂ ಕಾದು ಕಾದು ಬಸವಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನವೇ ನಿಗದಿತ ಸಮಯಕ್ಕೆ ಸರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆರಂಭಿಸಿದರೆ ನಿಶ್ಚಿತವಾಗಿಯೂ ಪ್ರೇಕ್ಷಕರು ಮೈದಾನದತ್ತ ಬರುತ್ತಾರೆ. ಆದರೆ, ವೇದಿಕೆ ಕಾರ್ಯಕ್ರಮವೇ ಮೊದಲು ಆರಂಭವಾಗಿ ನಾಲ್ಕಾರು ಮಂದಿಗೆ ಮಾತನಾಡಲು ಅವಕಾಶ ಕೊಟ್ಟರೆ ಪ್ರೇಕ್ಷಕರು ಬರುವುದೇ ಇಲ್ಲ.

ADVERTISEMENT

ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾದ ಮೊದಲ ದಿನವಾದ ಮಂಗಳವಾರ ಕಾರ್ಯಕ್ರಮ ಆರಂಭವಾಗುವಷ್ಟರಲ್ಲಿ 7.30 ದಾಟಿತ್ತು. ಸ್ವಾಗತ, ಭಾಷಣಗಳು ಮುಗಿದ ಬಳಿಕ ಕಾರ್ಯಕ್ರಮಗಳು ಆರಂಭವಾದವು.

ಸಾಕಷ್ಟು ಪ್ರಚಾರದ ಕೊರತೆ ಇದ್ದುದ್ದರಿಂದ ಮೊದಲ ದಿನ ಪ್ರೇಕ್ಷಕರಿಲ್ಲದೇ ಮೈದಾನ ಬಣಗುಡುತ್ತಿತ್ತು. ಎಲ್ಲೆಲ್ಲೂ ಖಾಲಿ ಕುರ್ಚಿಗಳೇ ಕಂಡು ಬಂದವು. ಸಾಂಸ್ಕೃತಿಕ ಕಾರ್ಯಕ್ರಮಗಳು  ಆರಂಭವಾದ ನಂತರ ಒಂದಷ್ಟು ಸಂಖ್ಯೆಯಲ್ಲಿ ಜನರು ಬಂದರು. ಇನ್ನಾದರೂ, ನಿಗದಿತ ಸಮಯಕ್ಕೆ ಕಾರ್ಯಕ್ರಮಗಳನ್ನು ಆರಂಭಿಸುವ ಸಮಯ ಪಾಲನೆ ದಸರಾ ಕಾರ್ಯಕ್ರಮಗಳಲ್ಲಿ ಆಗಬೇಕಿದೆ.

ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭಿಸುವುದು ಯಾವಾಗ? ಸಭಿಕರಿಂದ ವ್ಯಕ್ತವಾಗುತ್ತಿದೆ ಅಸಮಾಧಾನ ಕಾರ್ಯಕ್ರಮ ನಿರ್ವಹಣೆಯಲ್ಲಿ ಬೇಕಿದೆ ಸುಧಾರಣೆ

ದಸರಾ ಕಾರ್ಯಕ್ರಮಗಳು ತಡವಾದರೆ ವೇದಿಕೆಯ ಮೇಲೆ ನಿತ್ಯವೂ ಭಾಷಣಗಳನ್ನು ಮಾಡಿಸಿದರೆ ನಿಜಕ್ಕೂ ಇಲ್ಲಿಗೆ ಬರುವುದೇ ಬೇಡ ಅನ್ನಿಸುತ್ತದೆ
ರಾಣಿ ಮಡಿಕೇರಿ ನಿವಾಸಿ.
ನಾವು ಬರುವುದು ಭಾಷಣ ಕೇಳುವುದಕ್ಕೆ ಅಲ್ಲ. ಅತಿಥಿಗಳಿಗೆ ಹಾರ ತುರಾಯಿ ಕೊಡಬೇಕಿದ್ದರೆ ಕಾರ್ಯಕ್ರಮಗಳೆಲ್ಲ ಮುಗಿದ ಬಳಿಕ ವೇದಿಕೆ ಕಾರ್ಯಕ್ರಮ ಮಾಡಿ
ಸಿಂಚನಾ ವಿದ್ಯಾರ್ಥಿನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.