
ಮಡಿಕೇರಿ: ಮಡಿಕೇರಿಯ ಡಾ.ಕನ್ನಂಡ ನವಿತಾ ಸೋಮಯ್ಯ ಅವರು ಸ್ತನ ಕ್ಯಾನ್ಸರ್ ಕುರಿತು ನಡೆಸಿದ ಸಂಶೋಧನೆಗಾಗಿ ಯುನೈಟೆಡ್ ಕಿಂಗ್‌ಡಮ್‌ನ ಶೈಕ್ಷಣಿಕ ಮತ್ತು ಸಂಶೋಧನಾ ವಲಯದ ಅತ್ಯುನ್ನತ ರಾಷ್ಟ್ರೀಯ ಗೌರವ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ ಲಭಿಸಿದೆ.
ಅವರು ಲಂಡನ್‌ನ ‘ಇನ್‌ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ರಿಸರ್ಚ್’ (ಐಸಿಆರ್)ನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಈ ಸಂಸ್ಥೆಯಲ್ಲಿನ ಒಟ್ಟು 8 ವಿಜ್ಞಾನಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆ.24ರಂದು ಬೆಳಿಗ್ಗೆ 11.30ಕ್ಕೆ ಸೇಂಟ್ ಜೇಮ್ಸ್ ಪ್ಯಾಲೇಸ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಅವರು ಮಡಿಕೇರಿಯ ಕನ್ನಂಡ ಪೊನ್ನಪ್ಪ ಸೋಮಯ್ಯ ಹಾಗೂ ಡಾ.ಕನ್ನಂಡ ನಿರ್ಮಲಾ ಸೋಮಯ್ಯ (ತಾಯಿ ಮನೆ: ನಾಯಕಂಡ) ದಂಪತಿಯ ಪುತ್ರಿ. ಪ್ರಸ್ತುತ ಅವರು ಐಸಿಆರ್‌ನಲ್ಲಿ ವಿಜ್ಞಾನಿ ಹಾಗೂ ಗ್ರೂಪ್ ಲೀಡರ್ ಆಗಿದ್ದಾರೆ. 65ಕ್ಕೂ ಹೆಚ್ಚು ಸಂಶೋಧನಾ ಮತ್ತು 6 ಅಧ್ಯಯನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.