
ಮಡಿಕೇರಿಯ ಮಹದೇವಪೇಟೆಯಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯಿಂದ ಬುಧವಾರ ಇಡೀ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕನಿಷ್ಠ ಪಕ್ಷ ಇಂತಹದ್ದೊಂದು ಕಾಮಗಾರಿ ನಡೆಯುತ್ತಿದೆ ಎಂಬ ಕಾರಣಕ್ಕೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಯಾವುದೇ ವ್ಯವಸ್ಥೆ ಇಲ್ಲದೇ ಇದ್ದುದ್ದರಿಂದ ಇಡೀ ರಸ್ತೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.
ಅದರಲ್ಲೂ ಈ ರಸ್ತೆಯಲ್ಲಿ ಶಾಲೆಗಳಿವೆ. ಶಾಲೆ ಬಿಡುವ ಸಮಯದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇತ್ತು. ರಸ್ತೆ ದಾಟಲು, ರಸ್ತೆಯಲ್ಲಿ ನಡೆಯಲು ಮಕ್ಕಳು ಅಕ್ಷರಶಃ ಪರದಾಡಿದರು. ಇನ್ನು ಮುಂದಾದರೂ ಇಂತಹ ಕಾಮಗಾರಿಗಳು ಜನನಿಬಿಡ ರಸ್ತೆಗಳಲ್ಲಿ ರಾತ್ರಿ ವೇಳೆ ನಡೆಸಬೇಕು. ಆಗ ಯಾರಿಗೂ ತೊಂದರೆಯಾಗುವುದಿಲ್ಲ. ಹಗಲಿನ ವೇಳೆ ನಡೆಸಬೇಕಾದರೆ ಕನಿಷ್ಠ ಒಬ್ಬರಾದರೂ ಸಂಚಾರ ಪೊಲೀಸ್ ಇರುವಂತೆ ನೋಡಿಕೊಳ್ಳಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗಾದರೂ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಬೇಕು.
-ರಾಣಿ, ಮಹದೇವಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.