ADVERTISEMENT

ಮಡಿಕೇರಿ | ಬಹುಭಾಷಾ ಕವಿಗೋಷ್ಠಿ ನಾಳೆ

77 ಕವಿಗಳಿಂದ ನಡೆಯಲಿದೆ ಕವನ ವಾಚನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:05 IST
Last Updated 24 ಸೆಪ್ಟೆಂಬರ್ 2025, 5:05 IST
ಕವಿಗೋಷ್ಠಿ ಲೊಗೊ
ಕವಿಗೋಷ್ಠಿ ಲೊಗೊ   

ಮಡಿಕೇರಿ: ಮಡಿಕೇರಿ ದಸರಾ ಅಂಗವಾಗಿ ಸೆ.25 ರಂದು ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುವ ‘ಬಹುಭಾಷಾ ಕವಿಗೋಷ್ಠಿ’ಯಲ್ಲಿ ಕವನ ವಾಚಿಸಲು ವಿವಿಧ ಭಾಷೆಯ 77 ಕವಿಗಳು ಆಯ್ಕೆಯಾಗಿದ್ದಾರೆ. ಜೊತೆಗೆ, ಕವಿಗೋಷ್ಠಿಯಲ್ಲಿ ವಾಚಿಸುವ ಕವನಗಳನ್ನು ‘ಕಾವ್ಯ ಕಲರವ’ ಎಂಬ ಸಂಕಲನವನ್ನೂ ಹೊರತರಲಾಗುತ್ತದೆ. ಸಾಹಿತಿ ಸುನೀತಾ ಲೋಕೇಶ್ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ. ‘ಕೆಜಿಎಫ್’ ಸಿನಿಮಾದ ಚಿತ್ರ ಸಾಹಿತಿ ಕಿನ್ನಾಳ ರಾಜ್ ಅವರು ಭಾಗವಹಿಸಲಿದ್ದಾರೆ.

25ರಂದು ಬೆಳಿಗ್ಗೆ 9 ಗಂಟೆಗೆ ಗಾಂಧಿ ಮೈದಾನದ ರಸ್ತೆಯಲ್ಲಿರುವ ಕುವೆಂಪು ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಗಾಂಧಿ ಮೈದಾನದಲ್ಲಿ ಕವಿಗೋಷ್ಠಿ ಆರಂಭವಾಗಲಿದೆ.

ಡಿ.ಎಚ್.ಪುಷ್ಪಾ ಅವರ ‘ಸಂವೇದನೆ’ ಕವನ ಸಂಕಲನ ಮತ್ತು ಶೋಭಾ ರಕ್ಷಿತ್ ಅವರ ‘ಮನಸೆಳೆದ ಹಿಮಗಿರಿ’ ಪ್ರವಾಸ ಕಥನ ಪುಸ್ತಕಗಳೂ ಬಿಡುಗಡೆಯಾಗಲಿವೆ.

ADVERTISEMENT

ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಬಿ.ಆರ್. ಜೋಯಪ್ಪ ಪಾಲ್ಗೊಳ್ಳಲಿದ್ದಾರೆ.‌

ಆಯ್ಕೆಯಾದ ಕವಿಗಳು

ಕನ್ನಡ ವಿಭಾಗ: ಅಯ್ಯೇಟ್ಟಿ ಶ್ರುತಿ ವೈದ್ಯ, ಡಾ.ಅನುರಾಧಾ ಕುರುಂಜಿ, ಬಿ.ಬಿ.ಸೌಮ್ಯ ಶೆಟ್ಟಿ, ದೀಪಿಕಾ ರಾಘವೇಂದ್ರ, ನಿರ್ಮಲ ಪೂವಯ್ಯ, ಅಲ್ಲಾರಂಡ ವಿಠಲ ನಂಜಪ್ಪ, ಎಂ.ಕೆ.ಲಲಿತ, ಎಚ್.ಎಸ್.ವೇಣುಗೋಪಾಲ್, ಎಚ್.ಎಸ್.ಸಂತೋಷ, ಪೂರ್ಣಿಮಾ ಜೋಶಿ, ಕುಕ್ಕನೂರು ರೇಷ್ಮ ಮನೋಜ್, ಈರಮಂಡ ಹರಿಣಿ ವಿಜಯ್, ಬಿ.ಆರ್.ರಾಮಚಂದ್ರರಾವ್, ಕಡ್ಲೇರ ಆಶಾ ಧರ್ಮಾಪಾಲ್, ಮುಕ್ಕಾಟಿ ಹರಿಣಿ ಗಿರೀಶ್, ಪಿ.ಈ.ಸುಜಾತಾ, ಗಾಯತ್ರಿ ರಾಜೀವ್, ಹೇಮಲತಾ ಪೂರ್ಣಪ್ರಕಾಶ್, ವಿಜಯಶ್ರೀ ಅನಿಲ್ ಕೆದಿಲಾಯ, ಜಲಕಾಳಪ್ಪ, ಮಂಜುನಾಥ್ ಎಚ್. ಚಿರಕನಹಳ್ಳಿ, ರಾಧಿಕಾ ವಿಶ್ವನಾಥ್,  ಬಿ.ಎಸ್.ಚೇತನ್, ಪುಷ್ಪ ಶಿವರಾಂ ರೈ ಹಾಗೂ ಕಿಗ್ಗಾಲು ಗಿರೀಶ್.

ಇಂಗ್ಲಿಷ್ ವಿಭಾಗ: ಕೆ.ಆರ್.ಮನ, ಎನ್.ಜೆ.ಸಂಜನಾ, ಕೆ.ಆರ್.ಜೀವಿತಾ, ಡಾ.ವಾಣಿ ರಾಘವೇಂದ್ರ, ಬಿ.ಜಿ.ಅನಂತಶಯನ

ಕೊಡವ ಭಾಷೆ: ಕದ್ದಣಿಯಂಡ ವಂದನ ಚಿಣ್ಣಪ್ಪ, ಆರತಿ ಪೂಣಚ್ಚ ಕುಪ್ಪಂಡ, ಮೈನಾ ಚಂಗಪ್ಪ ಕುಮ್ಮಂಡ, ಬಾದುಮಂಡ ಬೀನಾ ಕಾಳಯ್ಯ,  ಪಿ.ಎಸ್.ವೈಲೇಶ, ಯಶೋಧ ಪೆರಿಯಂಡ.

ಅರೆಭಾಷೆ: ಕಟ್ರತನ ಲಲಿತಾ ಅಯ್ಯಣ್ಣ, ಸುಷ್ಮಿತ ಮಧು, ಕಡ್ಲೇರ ಜಯಲಕ್ಷ್ಮಿ, ರಂಜಿತ್ ಮೋದುರ ಕುದುಪಜೆ, ಅನನ್ಯ ಎಚ್ ಸುಬ್ರಮಣ್ಯ, ಜಶ್ಮಿ ಕಲ್ಲುಮುಟ್ಲು.

ತುಳು: ವಿನ್ಯಾಸ್ ಕುಲಾಲ್, ಪಿ.ಯು.ಸುಂದರ, ಪೂರ್ಣಿಮಾ ಪೆರ್ಲಂಪಾಡಿ, ಚೈತ್ರ ಬೆಳ್ಳರಿಮಾಡು

ಪುಷ್ಪ ಪ್ರಸಾದ್ ಉಡುಪಿ (ಕುಂಬಾರ), ಎಸ್.ಎಂ ರಜನಿ (ಯರವ), ಭಾಗೀರಥಿ ಹುಲಿತಾಳ(ಹವ್ಯಕ), ಸವಿತ ಕರ್ಕೆರ(ಹಿಂದಿ), ಕೂತಂಡ ಪೂಜಾ ಜಗತ್ (ಹಿಂದಿ), ರಶ್ಮಿತಾಸುರೇಶ್ (ಬೈರಬಾಸೆ), ಮಣಿ ವೈ.ಆರ್.(ಯರವ), ಸುನಿತಾ ವಿಶ್ವನಾಥ್(ಕುಂಬಾರ), ಔಹರ್ ಅಲಿ (ಬ್ಯಾರಿ), ಲೇಖಾ ಪ್ರಮೋದ್(ಮಲಯಾಳಂ), ಪವಿತ್ರ ಎಂ. )ಜೇನು ಕುರುಬ) , ಕೆ.ಎಂ.ಸುಶೀಲ(ಮಲಯಾಳಂ), ಅಬ್ದುಲ್ಲ ಮಡಿಕೇರಿ (ಬ್ಯಾರಿ)

ಮಕ್ಕಳ ಕವಿತೆ: ದಿಯಾ ಎಂ. ಗೌಡ, ಎಸ್.ತೇಜಸ್, ಪಿ.ಎಸ್.ಅಂಜಲಿ, ಜಸ್ಟಿನ್ ತಿಮ್ಮಯ್ಯ, ಕೆ.ಎಂ.ರುಷಿಕ, ಪ್ರಥಮ್ ಚಿಣ್ಣಪ್ಪ, ಎಸ್.ಪಿ.ಜನ್ಮಿತ, ಕೆ.ಸಿ.ಎಕಾಕ್ಷ್, ತಪಶ ಲೋಕೇಶ್, ಎಚ್.ಎಸ್.ಹಮ್ದನ್, ವೈ.ಟಿ.ಜಶ್ವತ್, ತಿಷ್ಯಾ ಪೊನ್ನೆಟ್ಟಿ, ಚಿನ್ಮಯ್, ಪೂರ್ವಿಕ ದೇವಯ್ಯ, ಸಫೀದಾ.

ಚುಟುಕಗಳು: ಹೇಮಂತ್ ಪಾರೇರ, ವಿ.ವಿ.ಪೂರ್ಣಿಮಾ ರಾವ್, ಗೌರಮ್ಮ ಮಾದಮ್ಮಯ್ಯ ಕವನ ವಾಚಿಸಲು ಆಯ್ಕೆಯಾಗಿದ್ದಾರೆ ಎಂದು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ತಿಳಿಸಿದ್ದಾರೆ.

25ರಂದು ಇಡೀ ದಿನ ನಡೆಯುವ ಕವಿಗೋಷ್ಠಿ ಕವನ ವಾಚನದೊಂದಿಗೆ ನಡೆಯಲಿದೆ ಪುಸ್ತಕ ಬಿಡುಗಡೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಕ್ತರು ಭಾಗಿಯಾಗಲು ಮನವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.