ADVERTISEMENT

ನದಿಗಳಲ್ಲಿ ತಗ್ಗಿದ ಪ್ರವಾಹ, ವಾಹನ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 12:29 IST
Last Updated 7 ಸೆಪ್ಟೆಂಬರ್ 2019, 12:29 IST
   

ಮಡಿಕೇರಿ: ಕೊಡಗಿನಲ್ಲಿ ಶನಿವಾರ ಬಿಡುವು ಕೊಟ್ಟು ಆಗಾಗ ರಭಸವಾಗಿ ಮಳೆಯಾಗುತ್ತಿದೆ.

ಮಡಿಕೇರಿ, ಸೋಮವಾರಪೇಟೆ, ಶಾಂತಳ್ಳಿ ಸುತ್ತಮುತ್ತ ಮಾತ್ರ ಜೋರು ಮಳೆಯಾಗುತ್ತಿದ್ದು ಉಳಿದೆಡೆ ಸಾಧಾರಣ ಮಳೆಯಿದೆ.

ನಾಲ್ಕು ದಿನ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಭೀತಿ ಎದುರಾಗಿತ್ತು. ಮಳೆಯ ಅಬ್ಬರ ತಗ್ಗಿದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಇಳಿದಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನಮಟ್ಟ ಇಳಿದಿದ್ದು, ಮೂರ್ನಾಡು – ನಾಪೋಕ್ಲು, ಭಾಗಮಂಡಲ – ನಾಪೋಕ್ಲು, ಮಡಿಕೇರಿ– ಭಾಗಮಂಡಲ– ತಲಕಾವೇರಿ ನಡುವೆ ವಾಹನ ಸಂಚಾರ ಆರಂಭವಾಗಿದೆ. ಕೊಡಗು ಸಹಜ ಸ್ಥಿತಿಯತ್ತ ಮರಳುತ್ತಿದೆ.

ADVERTISEMENT

ನಾಪೋಕ್ಲು, ತಲಕಾವೇರಿ, ಬೇತ್ರಿ, ಚೇರಂಬಾಣೆ, ಬಕ್ಕ, ಪಾಲೂರು, ಕೋರಂಗಾಲ, ಹೊದ್ದೂರು, ಕಕ್ಕಬ್ಬೆ, ನೆಲಜಿ, ಕೊಟ್ಟುಂಮುಡಿ, ವಿರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಸಿದ್ದಾಪುರ, ಕೊಡ್ಲಿಪೇಟೆ, ಶನಿವಾರಸಂತೆ, ಮಾದಾ‍ಪುರ, ಸುಂಟಿಕೊಪ್ಪ ಹಾಗೂ ಕುಶಾಲನಗರ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ.

ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬಿರುಕು
‘ಜೀವನದಿ’ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ದೊಡ್ಡ ಪ್ರಮಾಣದ ಬಿರುಕಿನಿಂದ ಒಂದು ಭಾಗದ ಬೆಟ್ಟವೇ ಕುಸಿಯುವ ಆತಂಕ ಎದುರಾಗಿದೆ.

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ನಾಲ್ಕು ದಿನ ಗಾಳಿ ಸಹಿತ ಭಾರೀ ಮಳೆ ಸುರಿದಿತ್ತು. ಅತಿಯಾದ ಮಳೆಯಿಂದ ಬಿರುಕು ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.