
ಗೋಣಿಕೊಪ್ಪಲು: ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗದ ಬಸ್ ನಿಲ್ದಾಣದಲ್ಲಿ ಕಾಟ್ರಕೊಲ್ಲಿ ಮಾತಾಯಿ ಪುರುಷ ಸ್ವ ಸಹಾಯ ಸಂಘದಿಂದ 20ನೇ ವರ್ಷದ ಮಹಾಶಿವರಾತ್ರಿ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಸ್ವಾಮೀಜಿ, ಶಿವನ ದ್ಯಾನದಿಂದ ಸದ್ಬುದ್ಧಿ ಬರಲಿದೆ. ಇದಕ್ಕಾಗಿ ಶಿವರಾತ್ರಿ ದಿನದಂದು ಜಾಗರಣೆ ಮಾಡಲಾಗುತ್ತದೆ. ಶ್ರೇಷ್ಠವಾಗಿರುವ ಮಾನವ ಜನ್ಮ ಅರ್ಥಪೂರ್ಣವಾಗಿ ಕಳೆಯಬೇಕು. ಸಕಲ ಜೀವಿಗಳಿಗೂ ಒಳಿತು ಬಯಸುತ್ತಾ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಪೊನ್ನಂಪೇಟೆ ಸಂತ ಅಂಥೋಣಿ ಶಾಲೆ ಫಾದರ್ ಮನೋಜ್ ಇಮಾನ್ಯುವೆಲ್ ಮಾತನಾಡಿ, ಎಲ್ಲ ಧರ್ಮದ ಉದ್ದೇಶವೂ ಸರ್ವರಿಗೂ ಒಳಿತನ್ನು ಬಯಸುವುದೇ ಆಗಿದೆ ಎಂದರು.
ಪೊನ್ನಂಪೇಟೆಯ ನಿವೃತ್ತ ಸೇನಾಧಿಕಾರಿ ಐನಂಡ ಕೆ.ಮಂದಣ್ಣ, ಕೆಪಿಎಸ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ರಂಗಯ್ಯ, ಕಿರುಗೂರಿನ ಪ್ರಗತಿಪರ ಕೃಷಿಕ ರವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಮಾಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪೊನ್ನಂಪೇಟೆ ಭಾಗದ 7, 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಿವರಾತ್ರಿ ಅಂಗವಾಗಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಾವೇರಿ ಕಲಾಸಿರಿ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು.
ಪೆರುಂಬಾಡಿಯ ಸಂಷುದ್ ಉಲಾಮ ಶಾಲೆ ಶಿಕ್ಷಕ ಆಲಿ ಮಾಸ್ಟರ್, ಪೊನ್ನಂಪೇಟೆ ಪ್ಯಾಕ್ಸ್ ಅಧ್ಯಕ್ಷ ಚೀರಂಡ ಕಂದಾಸುಬ್ಬಯ್ಯ, ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿದರು.
ಮಾತಾಯಿ ಪುರುಷರ ಸ್ವ ಸಹಾಯ ಸಂಘದ ಅಧ್ಯಕ್ಷ ಕರುಣಾಕರ ಬಿ.ಕೆ.ಅವರ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸಿ.ಬಿ.ವಿನೋದ್, ಕಾರ್ಯದರ್ಶಿ ಸುದರ್ಶನ್, ಖಜಾಂಚಿ ಎ.ಎ.ಹನೀಫ್, ಸದಸ್ಯರಾದ ರುದ್ರಪ್ಪ, ಸುರೇಶ್ ವಿ.ವಿ, ಅನೀಸ್ ಎಂ.ಬಿ, ವಿನು ಕೆ.ಬಿ, ಮುರಳಿ ಟಿ.ವಿ, ಕುಟ್ಟಪ್ಪ ಎಂ.ಕೆ, ಸುರೇಶ್ ಎಚ್.ಬಿ, ಅಣ್ಣಪ್ಪ ಬಿ.ಕೆ, ಉಮ್ಮರ್ ಕೆ.ಎಚ್, ಸಾದಿಕ್ ಎಂ.ಎಂ, ಮಹಮದ್ ಪಿ.ಎಂ, ಶೇಖರ್ ವಿ.ಬಿ, ಹರೀಶ್ ಇ.ಎ, ಮಂಜು ಎನ್, ಸತೀಶ್ ಎಸ್.ಪಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.