ADVERTISEMENT

ಬೀಟೆ ನಾಟಾ ಸಂಗ್ರಹ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಮೇ 2021, 16:40 IST
Last Updated 30 ಮೇ 2021, 16:40 IST
ಶನಿವಾರಸಂತೆ ಸಮೀಪದ ಕೂಗೂರಿನ ಕಾಫಿ ತೋಟದಲ್ಲಿ ಬೀಟೆ ಮರ ಕಡಿದು ಸಂಗ್ರಹಿಸಿದ್ದ ಆರೋಪಿ ಜಿ.ಎಂ.ರಘು ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವುದು
ಶನಿವಾರಸಂತೆ ಸಮೀಪದ ಕೂಗೂರಿನ ಕಾಫಿ ತೋಟದಲ್ಲಿ ಬೀಟೆ ಮರ ಕಡಿದು ಸಂಗ್ರಹಿಸಿದ್ದ ಆರೋಪಿ ಜಿ.ಎಂ.ರಘು ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವುದು   

ಶನಿವಾರಸಂತೆ: ಸಮೀಪದ ಕೂಗೂರು ಗ್ರಾಮದಲ್ಲಿ ಬೀಟೆ ಮರವನ್ನು ಅಕ್ರಮವಾಗಿ ಕಡಿದು ನಾಟಾವನ್ನು ದಾಸ್ತಾನಿರಿಸಿದ್ದ ಆರೋಪದಡಿ ಆರೋಪಿಯನ್ನು ಶನಿವಾರಸಂತೆ ವಲಯ ಅರಣ್ಯ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಚಿಕ್ಕಾರ ಗ್ರಾಮದ ಜಿ.ಎಂ.ರಘು ಬಂಧಿತ ಆರೋಪಿ.

ಕೂಗೂರು ಗ್ರಾಮದ ಕಾಫಿ ತೋಟದಲ್ಲಿ ಬೀಟೆ ಮರ ಕಡಿದು ನಾಟಾ ಮಾಡಿ ದಾಸ್ತಾನು ಮಾಡಲಾಗಿತ್ತು. ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ರಘುನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ತೋಟದ ಮಾಲೀಕ ಕೆ.ಎ.ಸೋಮೇಶೇಖರ್ ಅವರ ಪತ್ತೆಗೆ ಕ್ರಮ ಕೈಗೊಂಡಿದೆ.

ADVERTISEMENT

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಹಾಗೂ ಸೋಮವಾರಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಸೂರ್ಯ, ಅರಣ್ಯ ರಕ್ಷಕ ರಾಮಕೃಷ್ಣ ಶೆಟ್ಟಿ, ವೀಕ್ಷಕ ನಾಗರಾಜ್, ಆರ್.ಆರ್.ಟಿ. ಸಿಬ್ಬಂದಿ ದೇವಿಕಾಂತ್, ಯಜ್ಞಪ್ರಸಾದ್, ಕಿಶೋರ್, ಹರ್ಷಿತ್, ಯತೀಶ್ ಮತ್ತು ಭರತ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.