ಮಡಿಕೇರಿ: ಇಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಮಹಾಸಭೆಯಲ್ಲಿ ಯೂನಿಯನ್ ದತ್ತಿನಿಧಿ ಹೆಚ್ಚಿಸುವ ಕುರಿತು, ದವಸ ಭಂಡಾರಗಳ ಅಭಿವೃದ್ಧಿ, ಪುನಶ್ಚೇತನ, ಸಹಕಾರ ಇಲಾಖೆಯಲ್ಲಿ ಲೆಕ್ಕಪರಿಶೋಧನಾ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ, ಬೆಳೆನಷ್ಟ, ಜಿಲ್ಲೆಯ ರಸ್ತೆಗಳು ಹಾಳಾಗಿರುವ ಕುರಿತು ಚರ್ಚಿಸಿ ಮನವಿ ಸಲ್ಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ಎ.ಕೆ.ಮನು ಮುತ್ತಪ್ಪ ಮಾತನಾಡಿ, ‘ಸದಸ್ಯರು ಸಕ್ರಿಯರಾದರೆ ಸಂಘವು ಏಳಿಗೆ ಹೊಂದುತ್ತದೆ’ ಎಂದು ಹೇಳಿದರು.
‘ಸಹಕಾರ ಕ್ಷೇತ್ರದಿಂದ ಮಾತ್ರವೇ ಆರ್ಥಿಕ ಅಭಿವೃದ್ಧಿ ಮತ್ತು ಪ್ರಪಂಚದ 3ನೇ ಆರ್ಥಿಕ ಶಕ್ತಿಯಾಗಲು ಸಾಧ್ಯವೆಂದು ತಿಳಿದಿರುವ ಪ್ರಧಾನಮಂತ್ರಿ ಇತ್ತೀಚೆಗೆ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವ ಹೆಜ್ಜೆ ಇಟ್ಟಿದ್ದಾರೆ’ ಎಂದರು.
ಮಹಾಸಭೆಗೆ ಹಾಜರಾಗದೆ ಕೇವಲ ಊಟದ ಭತ್ಯೆಗಾಗಿ ಮಾತ್ರ ತೆರಳುವುದರಿಂದ ಸಂಘಗಳು ಶೋಚನೀಯ ಪರಿಸ್ಥಿತಿಗೆ ತಲುಪುತ್ತಿವೆ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.
ಯೂನಿಯನ್ ನಿರ್ದೇಶಕ ಕೆ.ಎಂ.ತಮ್ಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ, ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ, ಎನ್.ಎ.ರವಿ ಬಸಪ್ಪ, ಸಿ.ಎಸ್.ಕೃಷ್ಣ ಗಣಪತಿ, ಪಿ.ವಿ.ಭರತ್, ಎನ್.ಎ.ಉಮೇಶ್ ಉತ್ತಪ್ಪ, ಪಿ.ಸಿ.ಅಚ್ಚಯ್ಯ, ಪಿ.ಬಿ.ಯತೀಶ್, ವಿ.ಕೆ.ಅಜಯ್ ಕುಮಾರ್, ಎ.ಎಸ್.ಶ್ಯಾಮ್‌ಚಂದ್ರ, ಎನ್.ಎ.ಮಾದಯ್ಯ, ಎಚ್.ಎಂ.ರಮೇಶ್, ಯೂನಿಯನ್ ವ್ಯವಸ್ಥಾಪಕಿ ಆರ್.ಮಂಜುಳಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.