ADVERTISEMENT

ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆ: ನಿಮಿಷ 4, ಲೆಕ್ಕ ಹತ್ತಾರು, 101 ಮಕ್ಕಳ ಸಾಧನೆ

16ನೇ ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:07 IST
Last Updated 14 ಫೆಬ್ರುವರಿ 2026, 7:07 IST
ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ 16ನೇ ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 101 ವಿದ್ಯಾರ್ಥಿಗಳು
ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ 16ನೇ ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 101 ವಿದ್ಯಾರ್ಥಿಗಳು   

ಮಡಿಕೇರಿ: ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ  16ನೇ ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ʼಬ್ರೈನೋಬ್ರೈನ್” ಕೇಂದ್ರದ 101 ವಿದ್ಯಾರ್ಥಿಗಳು ಕೇವಲ 4 ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ 30 ಚಾಂಪಿಯನ್ ಟ್ರೋಫಿ, 37 ಚಿನ್ನದ ಪದಕ ಮತ್ತು 34 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಾಂಪಿಯನ್ ಟ್ರೋಫಿ ವಿಜೇತರು: ಸೋನ್ಹ್ ಸೋಮಣ್ಣ ಪಿ.ಸಿ, ಅನ್ವಿತ್ ಎಸ್, ಆರುಷಿ ಕೆ.ಸಿ, ದಿಯ ವೈ.ಬಿ, ಶ್ರೀಹಾನ್ ಸಂಜಯ್ ಜಿತ್ತಿ, ತನುಷ್ ಪೂವಣ್ಣ ಸಿ.ಪಿ, ರುಶಾಲಿ ಪಿ.ಜೆ, ತಪಸ್ಯ ಗೌರಿ ಎಂ, ವಿ.ಕೃಷ್ಣ ಸಾಹಿಲ್, ವಂಶಿ ಕೆ.ಎಂ, ಚಿನ್ಮಯಿ ಪಿ, ದೀಕ್ಷ ಭರತ್ ಎನ್, ಧ್ರುವತೇಜ್ ಪಿ, ದಿಗಂತ್ ಸಿ.ಪಿ, ಕನಿಷ್ಕ ಪಿ.ಸಿ, ಲಕ್ಷಿತ ಬಿ.ಆರ್., ನೇಹಲ್ ಡಿ.ವಿ, ನಿಲ್ಹಾ ಜೆ ತಾರಕನ್, ಹರ್ಷಿಣಿ ಎಂ.ಕೆ, ರೋನಿತ್ ಗಣಪತಿ ಎ.ಎಸ್, ಯಾನ್ವಿ ಬೋಜಮ್ಮ ಎಂ.ಪಿ, ಅಭಿನವ್ ಕೃಷ್ ಜಿ, ಆರಾಧ್ಯ ಕೆ.ಸಿ, ಏಡನ್ ಜೆ.ತಾರಕನ್, ದ್ರುಪದ್ ಪಿ ಮಣಿಕೋಥ್, ಮಯಾಂಕ್ ಎಂ, ಶೌರ್ಯ ಎಸ್.ವಿ ಕುಡ್ತೇಕರ್, ನಮನ್ ಎಂ.ಗೌಡ, ರೋನಿತ್ ತಮ್ಮಯ್ಯ ಪಿ.ಕೆ, ಸಮರ್ಥ್ ಆರ್.ಚಿನ್ನದ ಪದಕ ವಿಜೇತರುವಿಹಾನ್ಯ ಎಚ್.ಎ, ಹರಿಪ್ರಿಯ ವಿ.ಎಚ್, ಇಸ್ರಾಯೇಲ್ ಸಾನ್ವಿಕ್ ಎಸ್, ಜೆಶ್ವಿತ ತಂಗಮ್ಮ ಎ.ಪಿ, ವಿ.ಕೃಷ್ಣ ಸಂಜಿತ್, ದಿರಣ್ ಕೆ.ಎಸ್, ಸುಹಾಸ್ ಎಂ.ಎಚ್, ಚಾರ್ವಿ ಬಿ.ಆರ್, ಮೋನಿಷ್ ಬಿ.ಎಸ್, ಹಿತ ಶೆಟ್ಟಿ ಬಿ.ವೈ, ಶ್ರೀ ದರ್ಶನ್ ಎಸ್., ಪ್ರಥಮ್ ಚಿನ್ನಪ್ಪ ಬಿ.ಎಲ್, ರಿಯಾಂಕ ಎಂ, ಭುವನ್ ಹೆಚ್.ಆರ್, ಧನ್ವಿ ಪೂವಮ್ಮ ಬಿ.ಎಂ., ಧನ್ವಿನ್ ಪೂವಣ್ಣ ಬಿ.ಎಂ, ಜೊಹನ್ನಾ ಮಡ್ತಾ, ನಿಧಿ ಆರ್ ಅಣ್ವೇಕರ್, ಪಾವನಿ ಕೆ. ಕುಂದರ್, ರಿಯಾನ್ ಪೊನ್ನಪ್ಪ ಬಿ.ಡಿ, ವರುಣಿಕ.ಜಿ, ಲಿವ್ಯ ಸುನಿತ್‌ಕುಮಾರ್, ಲಾಂಛನ್ ಕೆ.ಟಿ, ಯಶ್‌ರಾಜ್ ಆರ್ ಅನ್ವೇಕರ್, ಲಾಲಿತ್ಯ ಅಶೋಕ್ ಸಿ, ಜಾರ್ಜ್ ಮ್ಯಾಥೀವ್, ಕೋಸಿಗಿ ಸಾತ್ವಿಕ್ ಸಮರ್ಥ್, ಪ್ರಧಾನ್ ಶತಾಯುಷ್, ಕೋಸಿಗಿ ಸಮರ್ಥ್ ಸಾಮ್ರಾಟ್, ಲಿನಿತ್ ಬಿ.ಎಲ್, ಶಿವಕುಮಾರ್ ಯು.ಆರ್, ಬಿ.ಡಿ.ಕುಶಿ, ಲಿಖಿತ್ ಸೋಮಣ್ಣ ಕೆ.ಎಲ್, ಸೃಷ್ಟಿ ಎಂ.ಆರ್, ಯಜತ್ ಗಣಪತಿ ಪಿ.ಕೆ, ಲಲಿತ್ ಆದಿತ್ಯ.ಬಿ, ಆಥಿರಾ ದಿನೇಶ್ ಮೆನನ್.ಬೆಳ್ಳಿ ಪದಕ ವಿಜೇತರುಭಾರ್ಗವ ಸಿ.ಎನ್, ಕನಿಷ್ಕ ಪಿ, ನಿಂಶಿ ಕೆ.ಎಂ. ಸಂಹಿತ ಶೆಟ್ಟಿ ಬಿ.ವೈ, ದಿವಿತ್ ಕೆ.ಎಸ್, ಕಿಶೋರ್ ಸಿ.ಎನ್, ಪೃಥ್ವಿಶ್ರೀ ಪಿ, ಇಸ್ರಾಯೇಲ್ ಸಾತ್ವಿಕ್ ಎಸ್, ಪುನಿತ್ ರಾಜ್ ಕೆ.ಆರ್, ಶಾನ್ ಪ್ರಥಮ್ ಬಿ.ಆರ್, ದಿಶಾ ಎಸ್. ಶಿರೂರು, ಕನಿಷ ಸುನಿತ್‌ಕುಮಾರ್, ಆರಾಧ್ಯ ಎ. ಅನ್ವೇಕರ್ , ಹಂಸಿನಿ ಎಸ್.ಪಿ, ವಿಕಾಸ್ ಎಚ್.ಎಚ್, ಆಧ್ಯ ಜಿ. ವರ್ಣೇಕರ್, ಪೂಜನ್ ಗೌಡ ಎಂ.ಎ, ಭುವನ್ ಕೆ.ಟಿ, ಮಾನ್ವಿ ಜಿ ವರ್ಣೇಕರ್, ತನಿಷ್ಕ ಕೆ.ಎ, ಗಾನವಿ ಗಂಗಮ್ಮ ಸಿ.ವಿ, ಮನ್ವಿತ ಎಸ್, ನಿಶ್ಚಲ್ ಆರ್, ಅದಿತ್ ಗೌತಮ್ ಕೆ, ಅನೀಸನ್ ಪಿ, ಭುವನ್ ತಿಮ್ಮಯ್ಯ ಎಂ, ಮಿಯಾ ಅರುಣ್, ಯಶಸ್ ಕೆ.ಯು, ಕಿಶಿ ಕಾವೇರಮ್ಮ ಎ.ಎಲ್, ಯಶಿಕ ಎಸ್, ಅಫ್ಫಾನ್ ಅಹ್ಮದ್ ಟಿ.ಬಿ, ಐಶ್ವರ್ಯ ಎಸ್, ದೃತಿ ಎ.ಎಂ, ಪ್ರಣತಿ ಎಸ್.ಪಿ.

ಸ್ಪರ್ಧೆಯು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ ಟಾಪ್ ಬಳಸಿ ಕಟ್ಟುನಿಟ್ಟಾದ 4 ನಿಮಿಷಗಳ ಕಾಲಮಿತಿಯೊಳಗೆ ಸಂಕೀರ್ಣವಾದ ಗಣಿತದ ಲೆಕ್ಕಗಳನ್ನು ಬಿಡಿಸುವುದನ್ನು ಒಳಗೊಂಡಿತ್ತು. 79 ರಾಷ್ಟ್ರಗಳ ಬ್ರೈನೋಬ್ರೈನ್ ಕೇಂದ್ರಗಳ ಒಟ್ಟು 23,912 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  ಕೊಡಗು ಜಿಲ್ಲೆಯ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದಿಂದ 101 ವಿದ್ಯಾರ್ಥಿಗಳು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.

ADVERTISEMENT

ಆನ್‌ಲೈನ್ ಸ್ಪರ್ಧೆಯಲ್ಲಿ 4 ನಿಮಿಷಗಳ ನಿಗದಿತ ಸಮಯ ಮಾತ್ರವಿದ್ದು, ಮಡಿಕೇರಿ ಗುಡ್ಡಗಾಡು ಪ್ರದೇಶದಲ್ಲಿ ಇಂಟರ್‌ನೆಟ್ ಕನೆಕ್ಷನ್ ಹಾಗೂ ನೆಟ್‌ವರ್ಕ್ ಸಮಸ್ಯೆಯೊಂದಿಗೆ ಮತ್ತು ಮಕ್ಕಳು ಯಾರ ಸಹಾಯವಿಲ್ಲದೆ ಏಕಾಂಗಿಯಾಗಿ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಲು ಅಭ್ಯಾಸ ಹೊಂದಿರದಿದ್ದರೂ ನಿಗದಿತ ಸಮಯದಲ್ಲಿ ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿದರು.
ಕರ್ನಾಟಕದಿಂದ ಭಾಗವಹಿಸಿದ ‘ಬ್ರೈನೋಬ್ರೈನ್’ ಕೇಂದ್ರಗಳ ಪೈಕಿ ಮಡಿಕೇರಿ ಕೇಂದ್ರಕ್ಕೆ ಶೇ 100 ರಷ್ಟು ಫಲಿತಾಂಶ ಬಂದಿದೆ.
ಆನ್‌ಲೈನ್ ಸ್ಪರ್ಧೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಡಾ.ಸೌಮ್ಯ ಸಹಕಾರ ನೀಡಿದರು ಎಂದು ತರಬೇತುದಾರ ಮಾಪಂಗಡ ಕವಿತಾ ಕರುಂಬಯ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.