
ಮಡಿಕೇರಿ: ಚುನಾವಣೆ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ನೀಡಿದ್ದ ಭರವಸೆ ಈಡೇರಿಸಲು ಬದ್ದನಿದ್ದೇನೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಹೇಳಿದರು.
ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಹಾಗೂ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವಂದೂರು ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದಾದ್ಯಂತ ರಸ್ತೆಗಳ ಅಭಿವೃದ್ಧಿಗೆ ಮನವಿಗಳ ಮಹಾಪೂರವೇ ಹರಿದು ಬರುತ್ತಿದ್ದು, ಆದ್ಯತೆ ಮೇರೆಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ ಅವರು, ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಟ್ಟಗೇರಿ, ಕೇಟೋಳಿ ಮತ್ತು ಕಾರುಗುಂದ ರಸ್ತೆ, ಕಾಳೇರಮ್ಮನ ಕುಟುಂಬ ರಸ್ತೆ, ಕಡ್ಯದ ಕುಟುಂಬಸ್ಥರ ರಸ್ತೆ, ನಿಂಗಪ್ಪನ ಕುಟುಂಬದವರ ಮನೆಗೆ ಹೋಗುವ ರಸ್ತೆ ಕಾಮಗಾರಿಗಳಿಗೆ ಪೂಜೆ ನೆರವೇರಿಸಿದ ಅವರು ಹೆರವನಾಡು ಮೇದರ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಪ್ರಮುಖರಾದ ತೆನ್ನಿರ ಮೈನಾ, ತೀರ್ಥ ಪ್ರಸಾದ್, ಬೆಟ್ಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ, ಹೊಸೂರು ಸೂರಜ್, ಡಿಸಿಸಿ ಸದಸ್ಯರಾದ ಕೇಟೋಳಿರ ಮೋಹನ್ ರಾಜ್,ಪಿ.ಎಲ್.ಸುರೇಶ್ ಸಂಪಾಜೆ, ಕೊಡವ ಸಾಹಿತ್ಯ ಅಕಾಡಮಿ ಸದಸ್ಯರಾದ ನಾಪಂಡ ಗಣೇಶ್, ಪ್ರಮುಖರಾದ ಕಾಳೇರಮ್ಮನ ಕುಮಾರ್, ಬಾಳಾಡಿ ಪ್ರತಾಪ್ ಕುಮಾರ್, ಪೂಜಾರಿರ ಪ್ರದೀಪ್ ಕುಮಾರ್, ಪಟ್ಟಡ ದೀಪಕ್, ಮಜೀದ್ ಬೆಟ್ಟಗೇರಿ, ಶಾಹಿದ್ ಬೆಟ್ಟಗೇರಿ, ಕೋಡಿ ಮೋಟಯ್ಯ, ಅರಂಬೂರು ನಾಗೇಶ್, ಹನೀಫ್ ಸಂಪಾಜೆ ಸೇರಿದಂತೆ ಕೇಟೋಳಿ ಕುಟುಂಬಸ್ಥರು, ಕಾಳೇರಮ್ಮನ ಕುಟುಂಬಸ್ಥರು, ಕಡ್ಯದ ಕುಟುಂಬಸ್ಥರು, ನಿಂಗಪ್ಪನ ಕುಟುಂಬಸ್ಥರು, ಮೇದರ ಕಾಲೋನಿ ನಿವಾಸಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.