
ಸೋಮವಾರಪೇಟೆ: ತಾಲ್ಲೂಕಿನ ತಣ್ಣೀರುಹಳ್ಳ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಜನ ಸಂದರ್ಶನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ತಣ್ಣೀರು ಹಳ್ಳ ಗ್ರಾಮದ ಅಭಿವೃದ್ಧಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಗ್ರಾಮದಲ್ಲಿನ ಮನೆ ಹಕ್ಕುಪತ್ರದ ಬಗ್ಗೆ ತಹಶೀಲ್ದಾರ್ ಜತೆ ಚರ್ಚಿಸಿ, ವಿಶೇಷ ತಂಡ ರಚನೆ ಮಾಡಿ ಸಮಸ್ಯೆ ಬಗೆ ಹರಿಸಲು ಗಮನ ಹರಿಸಲಾಗುವುದು. ಅಪಾಯದ ಸ್ಥಿತಿಯಲ್ಲಿರುವ ಮನೆಗಳನ್ನು ಗುರುತಿಸಿ ತಡೆಗೋಡೆ ಕಾಮಗಾರಿ ಮಾಡುವ ಭರವಸೆ ನೀಡಿದರು. ಅಲ್ಲದೆ ಗ್ರಾಮದ ಸಮುದಾಯ ಭವನದ ಅಡುಗೆ ಮನೆ ಹಾಗೂ ವಿವಿಧ ಕಾಮಗಾರಿಯ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಅಬ್ಬೂರುಕಟ್ಟೆ ಗ್ರಾಮದ ಎಸ್.ಎಂ. ಸತ್ತು ಡಿಸಿಲ್ವ ಗ್ರಾಮದ ಕುಂದು ಕೊರತೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಸ್ಥಳೀಯ ಗ್ರಾಮಸ್ಥರು ಮೂರು ತಲೆಮಾರುಗಳಿಂದ ಹಲವಾರು ಕುಟುಂಬಗಳು ವಾಸವಿದ್ದಾರೆ. ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ. ಮನೆಗೆ ಯಾವುದೇ ದಾಖಲಾತಿ ಇರುವುದಿಲ್ಲ. ಇಲ್ಲಿನ ಎಲ್ಲರಿಗೂ ಹಕ್ಕು ಪತ್ರ ನೀಡುವ ಕೆಲಸವಾಗಬೇಕು. ಅನೇಕ ಮನೆಗಳು ಗುಡ್ಡದ ಪ್ರದೇಶದಲ್ಲಿದ್ದು ಮನೆಗಳು ಕುಸಿಯುವ ಹಂತದಲ್ಲಿದೆ. ಮಳೆಗಾಲದಲ್ಲಿ ಶೀತದಿಂದಾಗಿ ಬರೆ ಕುಸಿತವಾಗುತ್ತಿದ್ದು, ಅಪಾಯ ಎದುರಾಗಿದೆ. ತಡೆಗೋಡೆ ನಿರ್ಮಿಸಿ ಕೊಡಬೇಕೆಂದು ಎಂದು ಮನವಿ ಮಾಡಿದರು.
ಗ್ರಾಮದ ನಿವಾಸಿ ಎಂ.ಸಿ. ದರ್ಶನ್ ಮಾತನಾಡಿ, ಹಿರಿಯರ ಕಾಲದಿಂಧ ನಾವು ಕೂಡ ಅದೇ ಲೈನ್ ಮನೆಯಲ್ಲಿಯೇ ವಾಸಿಸುತ್ತಿದ್ದೇವೆ. ನಮಗೆ ಆಶ್ರಯ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಬೇಕು. ತಣ್ಣೀರುಹಳ್ಳದಿಂದ ವಳಗುಂದ ಗ್ರಾಮಕ್ಕೆ ತೆರಳುವ ರಸ್ತೆ ತೀವ್ರ ಹದಗೆಟ್ಟಿದ್ದು ಸರಿಪಡಿಸಿಕೊಡಬೇಕೆಂದರು.
ಗ್ರಾಮದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಕ್ಕೆ 15 ವರ್ಷ ಕಳೆದರೂ ಇನ್ನೂ ಉದ್ಘಾಟನೆಯಾಗಿಲ್ಲ.ಭವನದ ಅಭಿವೃದ್ಧಿಗೆ ಶಾಸಕರ ಬಳಿ ಸಮುದಾಯ ಭವನದ ಅಧ್ಯಕ್ಷರದ ಪ್ರವೀಣ್ ರವರು ಅರ್ಜಿ ಮೂಲಕ ಮನವಿ ಮಾಡಿದರು .
ಬೂತ್ ಅಧ್ಯಕ್ಷ ಟಿ.ಬಿ. ಹರೀಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸತೀಶ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಕಿರಣ್ ಉದಯಶಂಕರ್, ಪಂಚಾಯಿತಿ ಸದಸ್ಯರಾದ ಪ್ರವೀಣ್, ಅಶ್ವಿನಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಲಾರೆನ್ಸ್, ಬೂತ್ ಉಪಾಧ್ಯಕ್ಷ ರಫೀಕ್, ಕಾರ್ಯದರ್ಶಿ ಆನಂದ್ ರಾಜ್, ಸೋಹನ್ ಡಿಸಿಲ್ವಾ, ವಲಯ ಅಧ್ಯಕ್ಷ ಲೋಕೇಶ್, ವಲಯ ಪ್ರಚಾರ ಸಮಿತಿ ಅಧ್ಯಕ್ಷ ದಿವಾಕರ್ ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.