ADVERTISEMENT

ನೇರುಗಳಲೆ ಪ್ರೌಢಶಾಲೆಯಲ್ಲಿ ಅಣಕು ಸಂಸತ್‌ ಚುನಾವಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 6:26 IST
Last Updated 12 ಜೂನ್ 2022, 6:26 IST
ಸೋಮವಾರಪೇಟೆ ಸಮೀಪದ ನೇರುಗಳಲೆ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಶಾಲಾ ಸಂಸತ್ತು ಚುನಾವಣಾ ನಡೆದು, ವಿದ್ಯಾರ್ಥಿಗಳು ತಮ್ಮ ಬೆರಳಿಗೆ ಹಾಕಿದ ಶಾಯಿ ಪ್ರದರ್ಶಿಸಿದರು
ಸೋಮವಾರಪೇಟೆ ಸಮೀಪದ ನೇರುಗಳಲೆ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಶಾಲಾ ಸಂಸತ್ತು ಚುನಾವಣಾ ನಡೆದು, ವಿದ್ಯಾರ್ಥಿಗಳು ತಮ್ಮ ಬೆರಳಿಗೆ ಹಾಕಿದ ಶಾಯಿ ಪ್ರದರ್ಶಿಸಿದರು   

ಸೋಮವಾರಪೇಟೆ: ಇಲ್ಲಿಗೆ ಸಮೀಪದ ನೇರುಗಳಲೆ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್‌ನಿಂದ ಶಾಲಾ ಅಣಕು ಸಂಸತ್‌ ಚುನಾವಣೆ ಶುಕ್ರವಾರ ಶಾಲಾ ಆವರಣದಲ್ಲಿ ನಡೆಯಿತು.

ಸಾರ್ವತ್ರಿಕ ಚುನಾವಣೆಯಲ್ಲಿ ಹೇಗೆ ನಡೆಯುತ್ತದೆ. ಮತದಾನದ ಹಕ್ಕುಳ್ಳವರು ಮತದಾನ ಮಾಡುವಹಾಗೆ, ವಿದ್ಯಾರ್ಥಿಗಳಿಂದ ಮತದಾನ ಮಾಡಿಸಲಾಯಿತು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಚುನಾವಣೆಯ ಪರಿಚಯ ಮಾಡಿಕೊಳ್ಳಲು ನೆರವಾಯಿತು.

ಗುರುತಿನ ಪತ್ರಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ತಂದಿದ್ದರು. ಎರಡು ಮೊಬೈಲ್ ಎಲೆಕ್ಟ್ರಾನಿಕ್ಸ್ ಮತಯಂತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಮತದಾನ ಮಾಡಿಸಲಾಯಿತು.

ADVERTISEMENT

ಈ ಸಂದರ್ಭ ಶಾಲಾ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿಯವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.