ADVERTISEMENT

ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ- ಸಸ್ಯ ಜಾತ್ರೆ

ಪುತ್ತೂರಿನ ದೇವಳ ಗದ್ದೆಯಲ್ಲಿ ಜ.10ರಿಂದ 12 ರವರೆಗೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 4:32 IST
Last Updated 8 ಜನವರಿ 2026, 4:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪುತ್ತೂರು: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಇವರ ಆಶ್ರಯದಲ್ಲಿ ಜ. 10ರಿಂದ 12ರವರೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುದ್ದಿ ಮಾಹಿತಿ ಟ್ರಸ್ಟ್, ಸುದ್ದಿ ಅರಿವು ಕೇಂದ್ರ ಮತ್ತು ರೈತ ಕುಡ್ಲ ಪ್ರತಿಷ್ಠಾನ ಮೇಳಕ್ಕೆ ಸಹಯೋಗ ನೀಡಿವೆ ಎಂದು ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಅವರು ಹೇಳಿದರು.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಜ.10ರಂದು ಬೆಳಿಗ್ಗೆ 10 ಗಂಟೆಗೆ ಸಚಿವ ಚೆಲುವರಾಯ ಸ್ವಾಮಿ ಅವರು ಉದ್ಘಾಟಿಸುವರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಳಿಗೆಗಳನ್ನು ಉದ್ಘಾಟಿಸುವರು. ಶಾಸಕ ಅಶೋಕ್ ರೈ ಅವರು ಅಧ್ಯಕ್ಷತೆ ವಹಿಸುವರು. ಅತ್ಯುತ್ತಮ ಕೃಷಿ ಸಾಧಕರಾದ ಪುತ್ತೂರಿನ ಪಂಜಿಗುಡ್ಡೆ ಈಶ್ವರ ಭಟ್, ಬಂಟ್ವಾಳದ ಪ್ರೇಮನಾಥ ಶೆಟ್ಟಿ, ಉಳ್ಳಾಲದ ಜಿ.ಟಿ. ರಾಜಾರಾಮ ಭಟ್, ಬೆಳ್ತಂಗಡಿಯ ಕಾಂತಪ್ಪ ಪೂಜಾರಿ, ಕಡಬದ ಅರವಿಂದ ಮುಳ್ಳಂಕೊಚ್ಚಿ, ಸುಳ್ಯದ ಡಿ.ಎನ್. ಚಂದ್ರಶೇಖರ್, ಮಂಗಳೂರಿನ ಪ್ರತಿಭಾ ಹೆಗ್ಡೆ, ಮೂಲ್ಕಿಯ ಪ್ರಮೀಳಾ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ADVERTISEMENT

ಅತ್ಯುತ್ತಮ ಕೃಷಿ ಕೂಲಿ ಕಾಮರ್ಿಕ ಪುರಸ್ಕಾರವನ್ನು ವೆಂಕಪ್ಪ ಜಿ. ಗೋಳ್ತಮಜಲು ಬಂಟ್ವಾಳ, ಶೀನಪ್ಪ ಪೂಜಾರಿ ಹೊಸಮಠ ಕಡಬ, ಲಿಂಗಪ್ಪ ಮಡಿವಾಳ ಬೆಳ್ತಂಗಡಿ, ತೀರ್ಥರಾಮ ಬೈತಡ್ಕ ಸುಳ್ಯ, ಮೋಹನದಾಸ ಕಾಮತ್ ಪುತ್ತೂರು ಅವರಿಗೆ ಪ್ರದಾನ ಮಾಡಲಾಗುವುದು. ಕೃಷಿ ಸಲಕರಣೆ ಉತ್ಪಾದಕ ಉದ್ಯಮಿ ಪುರಸ್ಕಾರವನ್ನು ಕೇಶವ ಗೌಡ ಅಮೈಗುತ್ತು, ಕೆ.ಪಿ. ಮಹಮ್ಮದ್ ಸಾದಿಕ್ ಪುತ್ತೂರು, ಪುರುಷೋತ್ತಮ ಬಿ. ಪಾಲ್ತಾಡಿ ಅವರಿಗೆ ನೀಡಲಾಗುವುದು. ಜ.12ರಂದು ಸಂಜೆ ಸಮಾರೋಪ ಸಮಾರಂಭ ನಡೆಯುವುದು ಎಂದರು.

ಗೋಷ್ಠಿಗಳು: ಮೈಸೂರು ವಿಭಾಗದ 8 ಜಿಲ್ಲೆಗಳ ರೈತ ಪ್ರತಿನಿಗಳು ಮೇಳದಲ್ಲಿ ಭಾಗವಹಿಸುವರು. ದ.ಕ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರು ಪಾಲ್ಗೊಳ್ಳವರು. ಜ.10ರಂದು ಮೊದಲ ದಿನ ಅಪರಾಹ್ನ 2.30ರಿಂದ ಗೇರು ಕೃಷಿ- ತಾಂತ್ರಿಕತೆ ಎಂಬ ವಿಚಾರದಲ್ಲಿ ವಿಚಾರ ಗೋಷ್ಠಿ, 11ರಂದು ಬೆಳಗ್ಗೆ 10ರಿಂದ ಅಡಿಕೆ ಮತ್ತು ಕಾಳುಮೆಣಸು ಕೃಷಿ ಕುರಿತ ಗೋಷ್ಠಿ, ಅಪರಾಹ್ನ 2.30ರಿಂದ ಕಾಫಿ, ಹಣ್ಣು ಮತ್ತು ಇತರ ಪಯರ್ಾಯ ಬೆಳೆಗಳ ಬಗ್ಗೆ ಗೋಷ್ಠಿ, 12ರಂದು ಬೆಳಿಗ್ಗೆ 10ರಿಂದ ಭತ್ತದ ಕೃಷಿ ಬಗ್ಗೆ ಗೋಷ್ಠಿ ನಡೆಯುವುದು. ಮೂರು ದಿನಗಳಲ್ಲಿ ಸಾಂಸ್ಕೃತಿ ಕ ಕಾರ್ಯಕ್ರಮಗಳು ನಡೆಯುವುದು ಎಂದು ವಿಜಯಕುಮಾರ್ ರೈ ಅವರು ತಿಳಿಸಿದರು.

ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದಶರ್ಿ ರಾಕೇಶ್ ರೈ ಕೆಡೆಂಜಿ, ಕೋಶಾಕಾರಿ ಕುಸುಮಾಧರ ಎ.ಟಿ, ಉಪಾಧ್ಯಕ್ಷ ಚಂದ್ರ ಕೋಲ್ಚಾರ್, ಕಡಬ ತಾಲ್ಲೂಕು ಪ್ರತಿನಿಧಿ ಮಹೇಶ್ ಕೆ. ಸವಣೂರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.