ADVERTISEMENT

ಮಕ್ಕಿ ಶಾಸ್ತಾವು ಉತ್ಸವ ಆರಂಭ: ಶ್ರದ್ಧೆಯ ಎತ್ತೇರಾಟ

​ಪ್ರಜಾವಾಣಿ ವಾರ್ತೆ
Published 3 ಮೇ 2025, 13:19 IST
Last Updated 3 ಮೇ 2025, 13:19 IST
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಸ್ಥಾನದ ಪ್ರಾಂಗಣದಲ್ಲಿ ಶನಿವಾರ ಸ್ಥಳೀಯರು ದುಡಿಕೊಟ್ಟ್ ಪಾಟ್ಟ್‌ ಹಾಡಿದರು 
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಸ್ಥಾನದ ಪ್ರಾಂಗಣದಲ್ಲಿ ಶನಿವಾರ ಸ್ಥಳೀಯರು ದುಡಿಕೊಟ್ಟ್ ಪಾಟ್ಟ್‌ ಹಾಡಿದರು    

ನಾಪೋಕ್ಲು: ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವದ ಅಂಗವಾಗಿ ಶನಿವಾರ ಎತ್ತೇರಾಟ ನಡೆಯಿತು. ಭಕ್ತರು ಅಧಿಕ ಸಂಖ್ಯೆಯ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಶನಿವಾರ ದೇವಸ್ಥಾನ ಪ್ರಾಂಗಣದಲ್ಲಿ ಎರಡು ಸುತ್ತಿನ ಎತ್ತೇರಾಟ ನಡೆಯಿತು. ಎತ್ತುಗಳ ಮೇಲೆ ಅಕ್ಕಿಯ ಚೀಲಗಳನ್ನಿರಿಸಿ ಭಕ್ತರು ಹರಕೆ ಸಲ್ಲಿಸುವುದು ಪದ್ಧತಿ. ಹನ್ನೆರಡು ಎತ್ತುಗಳ ಸಹಿತ ಭಕ್ತರು ದೇವಾಲಯದ ಸುತ್ತ ದುಡಿಕೊಟ್ಟ್ ಪಾಟ್ಟಿನೊಂದಿಗೆ(ದುಡಿ ವಾದ್ಯದೊಂದಿಗೆ ಹಾಡು) ಸಾಗಿದರು. ಈ ಅಪೂರ್ವ ಕ್ಷಣಗಳನ್ನು ವೀಕ್ಷಿಸಲು ವಿವಿಧ ಗ್ರಾಮಗಳ ಭಕ್ತರು ನೆರೆದಿದ್ದರು. ಬಳಿಕ  ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ  ಪ್ರಸಾದ ವಿತರಿಸಲಾಯಿತು.

ಮೇ ತಿಂಗಳ 3 ಮತ್ತು 4 ರಂದು ವಿಜೃಂಭಣೆಯಿಂದ ನಡೆಯುವ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಶುಕ್ರವಾರ ರಾತ್ರಿ ವಿವಿಧ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಶನಿವಾರ ರಾತ್ರಿ ದೀಪಾರಾಧನೆ-ಅಂದಿಬೊಳಕ್ ನಡೆಯಿತು.  ಕರಿಬಾಳೆ, ಕುಟ್ಟಿಚಾತ, ನುಚ್ಚುಟ್ಟೆ ಕೋಲಗಳು ಜರುಗಿದವು. ಪಟ್ಟಣ, ಸುತ್ತಲಿನ ಗ್ರಾಮಗಳ ಭಕ್ತರು  ಪಾಲ್ಗೊಂಡಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿಗಳನ್ನು ನೆರವೇರಿಸಿದರು.

ADVERTISEMENT

ನಾಳೆ ವಿಶೇಷ: ಭಾನುವಾರ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲ ಜರುಗಲಿದೆ. ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟೀರ ಶ್ಯಾಮ್ ಬೋಪಣ್ಣ ಹೇಳಿದರು.

ನಾಪೋಕ್ಲು ಸಮೀಪದ ಬೇತು ಗ್ರಾಮದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದ ಪ್ರಾಂಗಣದಲ್ಲಿ ಶನಿವಾರ ಎತ್ತೇರಾಟ ಸಾಂಪ್ರದಾಯಿಕ ಆಚರಣೆಯನ್ನು ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.