ಮಡಿಕೇರಿ: ನಗರದ ಮ್ಯಾನ್ಸ್ ಕಾಂಪೌಂಡ್ ಕ್ಲಬ್ನ ಸುವರ್ಣ ಮಹೋತ್ಸವ ಅಂಗವಾಗಿ ಮೇ 25 ಮತ್ತು 26ರಂದು ಜಿಲ್ಲಾ ಕ್ರಿಡಾಂಗಣದಲ್ಲಿ ಜಿಲ್ಲಾಮಟ್ಟದ ಫುಟ್ಬಾಲ್ ಟೂರ್ನಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಕ್ರಿಸ್ಟೋಫರ್ ತಿಳಿಸಿದರು.
1968ರಲ್ಲಿ ಆರಂಭವಾದ ಕ್ಲಬ್, 2018ಕ್ಕೆ 50 ವರ್ಷ ಪೂರೈಸಿದೆ. ಈ ನೆನಪಿಗಾಗಿ ಎರಡು ದಿನಗಳ ಜಿಲ್ಲಾಮಟ್ಟದ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟೂರ್ನಿಯಲ್ಲಿ 26 ತಂಡಗಳಿಗೆ ಅವಕಾಶ ನೀಡಲು ಉದ್ದೇಶಿದ್ದು, ಮೊದಲು ನೋಂದಾಯಿಸಿಕೊಂಡ ತಂಡಗಳಿಗೆ ಟೂರ್ನಿ ನಡೆಯಲಿದೆ. ಪ್ರತಿ ತಂಡಕ್ಕೆ ₹ 2 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತ ತಂಡಗಳು ಮೇ 22ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಸ್ಥಾನ ₹ 22 ಸಾವಿರ ನಗದು, ದ್ವಿತೀಯ ಸ್ಥಾನಕ್ಕೆ ₹13 ಸಾವಿರ ನಗದು ಹಾಗೂ ಟ್ರೋಫಿ ವಿತರಣೆ ಮಾಡಲಾಗುವುದು. ಜತೆಗೆ ಅತ್ಯುತ್ತಮ ಗೋಲ್ ಕೀಪರ್, ಅತ್ಯುತ್ತಮ ಆಟಗಾರ ಸೇರಿದಂತೆ ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಮಾಹಿತಿಗೆ ಮೊ: 70199 09495, 94489 76406 ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಎಂಸಿಸಿ ಕಾರ್ಯದರ್ಶಿ ಪಿ. ಉಮೇಶ್ ಕುಮಾರ್, ಖಜಾಂಚಿ ಪೀಟರ್, ಹಿರಿಯ ಆಟಗಾರ ಎನ್.ಕೆ. ರವೀಂದ್ರ, ಸದಸ್ಯ ಬಿ.ಜೆ. ಮನೋಜ್ ಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.