ADVERTISEMENT

ಯೋಧ ಮಹೇಶ್‌ಗೆ ಗುಂಡೇಟು: ಅಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 13:52 IST
Last Updated 8 ಜೂನ್ 2019, 13:52 IST
ಎಚ್.ಎನ್.ಮಹೇಶ್
ಎಚ್.ಎನ್.ಮಹೇಶ್   

ಗೋಣಿಕೊಪ್ಪಲು: ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲದಿನಗಳ ಹಿಂದೆ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊನ್ನಂಪೇಟೆಯ ಯೋಧ ಎಚ್.ಎನ್.ಮಹೇಶ್ ಅವರ ಮೂಗಿಗೆ ಗುಂಡು ತಗುಲಿದೆ. ಪಂಜಾಬ್‌ನ ಚಂಡೀಗಡ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರಪತಿಯವರಿಂದ ಶೌರ್ಯಪ್ರಶಸ್ತಿಗೆ ಭಾಜನರಾದ ಮಹೇಶ್ ಮೇ 29ರಂದು ಜಮ್ಮು-ಕಾಶ್ಮೀರದ ಶೋಪಿಯಾನ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಹಾರಿಸಿದ ಗುಂಡಿನಿಂದ ಈ ಅಪಾಯ ಸಂಭವಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಧನ ತಂದೆ ನಾಗರಾಜು, ದೂರವಾಣಿ ಮುಖಾಂತರ ಮಾತನಾಡಿರುವ ಮಗ, ‘ಗುಣಮುಖವಾಗುತ್ತಿದ್ದೇನೆ, ಹೆಚ್ಚಿನ ಅಪಾಯವಿಲ್ಲ ಎಂದು ತಿಳಿಸಿದ್ದಾನೆ. ಆದರೆ ಹೆಚ್ಚು ಮಾತನಾಡಿಲು ಆಗುತ್ತಿರಲಿಲ್ಲ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.