ADVERTISEMENT

ಶಿಥಿಲಾವಸ್ಥೆಗೆ ತಲುಪಿದ ಅಂಗನವಾಡಿ ಕೇಂದ್ರ: ಪುಟ್ಟ ಮಕ್ಕಳಿಗೆ ಕಾಡುತ್ತಿದೆ ಭಯ!

ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಮೇ 2019, 13:11 IST
Last Updated 5 ಮೇ 2019, 13:11 IST
ಅಭ್ಯತ್‌ಮಂಗಲ ಪೈಸಾರಿ ಅಂಗನವಾಡಿ ಕೇಂದ್ರ ಸ್ಥಿತಿ
ಅಭ್ಯತ್‌ಮಂಗಲ ಪೈಸಾರಿ ಅಂಗನವಾಡಿ ಕೇಂದ್ರ ಸ್ಥಿತಿ   

ಮಡಿಕೇರಿ: ಕುಶಾಲನಗರ ಹೋಬಳಿಯ ವಾಲ್ನೂರು ತ್ಯಾಗತೂರು ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ ಪೈಸಾರಿ ಅಂಗನವಾಡಿ ಕೇಂದ್ರದಲ್ಲಿ ಆಟ–ಪಾಠ ಕಲಿಕೆಯಪುಟ್ಟಮಕ್ಕಳಿಗೆ ಅಭದ್ರತೆ ಕಾಡುತ್ತಿದೆ.

ಕೇಂದ್ರದ ಸುತ್ತಬಿರುಕು ಬಿಟ್ಟ ಗೋಡೆಗಳು,ಸೋರುತ್ತಿರುವ ಛಾವಣಿ... ಇದು ಅಧಿಕಾರಿಗಳ ಕಣ್ಣಿಗೆ ಬಿದ್ದರೂ ಇದರ ನಿರ್ವಹಣೆಯತ್ತ ಆಸಕ್ತಿ ವಹಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಊರಿನಲ್ಲಿ ಸ್ಥಳೀಯರಹಾಗೂ ಕಾರ್ಮಿಕ ಮಕ್ಕಳಿಗೆ ಅನುಕೂಲಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 14 ವರ್ಷಗಳ ಹಿಂದೆ ದಾನಿಗಳಿಂದಜಾಗ ಪಡೆದು ಸಣ್ಣದಾಗಿ ಅಂಗನವಾಡಿ ಪ್ರಾರಂಭಿಸಿತ್ತು; ಆದರೆ, ನಂತರದ ದಿನಗಳಲ್ಲಿ ಹಳೆಯದಾದ ಕಟ್ಟಡದ ನಿರ್ವಹಣೆಗೆ ಇಲಾಖೆ ಮುಂದಾಗಲಿಲ್ಲ ಎಂದು ಗ್ರಾಮಸ್ಥ ಕೊಳಂಬೆ ವಿನುಕುಮಾರ್ ದೂರಿದರು.

ADVERTISEMENT

ಪ್ರಸ್ತುತ 3 ವರ್ಷದಿಂದ 6 ವರ್ಷದೊಳಗಿನ 17 ಮಕ್ಕಳಿದ್ದು ಸಿಬ್ಬಂದಿಗಳು ಶಿಕ್ಷಣ ಹಾಗೂ ಪೌಷ್ಟಿಕಾಂಶದ ಆಹಾರ ಜತೆಗೆ ಮಕ್ಕಳನ್ನು ಉತ್ತಮ ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿನ ಕಟ್ಟಡ ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಮಕ್ಕಳಿಗೆ ಹೊರಗೆ ಚಾಪೆ

ಕೇಂದ್ರದ ಮೇಲಿರುವ ಶೀಟು ಗಾಳಿಯ ರಭಸಕ್ಕೆಜಾರಿಕೊಳ್ಳುತ್ತಿದೆ. ಅಕ್ಕಪಕ್ಕದವರನ್ನುಕರೆಸಿ ಶೀಟನ್ನು ಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ನಂತರ ಮಕ್ಕಳನ್ನು ಮಲಗಳು ಚಾಪೆ ಹಾಕಿಹೊರಗಡೆ ಮಲಗಿಸುವ ಪರಿಸ್ಥಿತಿ ಕೇಂದ್ರದಲ್ಲಿದೆ ಎಂದು ಮಕ್ಕಳ ಪೋಷಕರು ದೂರುತ್ತಾರೆ.

ಕಲಿಯುವ ಸ್ಥಳವೇ ದಾಸ್ತಾನು ಕೊಠಡಿ

ಅಂಗನವಾಡಿ ಕೇಂದ್ರ ಸಣ್ಣದಾಗಿರುವುದರಿಂದ ಇಲ್ಲಿಗೆ ಬರುವ ಸಾಮಾಗ್ರಿಗಳನ್ನು ಸಂಗ್ರಹಿಸಿಡಲುಸ್ಥಳವಿಲ್ಲ; ಮಕ್ಕಳು ಕಲಿಯುವ ಕೋಣೆಯ ಮತ್ತೊಂದು ಬದಿಯೇ ದಾಸ್ತಾನನ್ನು ಒಂದರಮೇಲೊಂದರಂತೆ ಗುಡ್ಡೆ ಹಾಕಿಡಲಾಗಿದೆ.

ಇಕ್ಕಟ್ಟಾದ ಕೇಂದ್ರವನ್ನು ವೀಕ್ಷಿಸಿದ್ದ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಸ್ಥಿತಿ ತಿಳಿದು ಈಗಿರುವ ಕಟ್ಟಡದ ಮುಂಭಾಗದಲ್ಲೇನೂತನ ಕಟ್ಟಡ ಮಾಡುತ್ತೇವೆಂದುಭರವಸೆ ನೀಡಿ ಹೋದವರೂ ಈವರೆಗೆ ಕಾರ್ಯರೂಪಕ್ಕೆ ತರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮಳೆಹಾನಿ ದುರಸ್ತಿ ಅನುದಾನದಲ್ಲಿ ಹೆಚ್ಚಿನ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳನ್ನು ದುರಸ್ತಿ ಪಡಿಸಲಾಗುತ್ತಿದೆ; ಆದರೆ, ಈ ಕೇಂದ್ರದ ದುರಸ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮುಂದಿನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ವಾಲ್ನೂರು ತ್ಯಾಗತೂರು ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.