ADVERTISEMENT

ಕಸ ಮುಕ್ತ ಕೊಡಗು: ಸಿದ್ದಾಪುರದಲ್ಲಿ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಮೇ 2019, 12:29 IST
Last Updated 21 ಮೇ 2019, 12:29 IST
ಕ್ಲೀನ್ ಕೂರ್ಗ್ ಸಂಸ್ತೆಯ ಸದಸ್ಯರಿಂದ ಸೈಕಲ್ ಜಾಥ
ಕ್ಲೀನ್ ಕೂರ್ಗ್ ಸಂಸ್ತೆಯ ಸದಸ್ಯರಿಂದ ಸೈಕಲ್ ಜಾಥ   

ಸಿದ್ದಾಪುರ: ಕ್ಲೀನ್ ಕೂರ್ಗ್ ಸಂಸ್ಥೆ, ಲಯನ್ಸ್ ಕ್ಲಬ್ ಸಿದ್ದಾಪುರ, ವಿರಾಜಪೇಟೆ ಹಾಗೂ ಮೂರ್ನಾಡು ಮತ್ತು ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದಲ್ಲಿ ಕಸದ ಸಮಸ್ಯೆ ಮತ್ತು ತಡೆಗಟ್ಟುವ ಕ್ರಮದ ಬಗ್ಗೆ ಸೈಕಲ್ ಜಾಥ ಹಾಗೂ ಅರಿವು ಕಾರ್ಯಕ್ರಮ ಲಯನ್ಸ್ ಸಭಾಂಗಣದಲ್ಲಿ ನಡೆಯಿತು.

ಕೊಡವ ಕಲ್ಚರಲ್ ಅಸೋಸಿಯೇಷನ್ ಉಪಾಧ್ಯಕ್ಷ ಅಜಿನಿಕಂಡ ವೀಣಾ ಕುಂಞಪ್ಪ ಮಾತನಾಡಿ, ಇತ್ತೀಚಿಗಿನ ದಿನದಲ್ಲಿ ಬೇಕಾಬಿಟ್ಟಿ ಕಸ ಎಸೆಯಲಾಗುತ್ತಿದ್ದು, ಪರಿಸರ ನಾಶವಾಗುತ್ತಿದೆ. ಯುವ ಪೀಳಿಗೆ ಪ್ಲಾಸ್ಟಿಕ್‌ ವಸ್ತುಗಳಿಂದ ದೂರ ಇದ್ದು, ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಎಂ.ಕೆ ಮಣಿ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಕಸದ ಸಮಸ್ಯೆ ಎದುರಾಗಿದ್ದು, ಸೂಕ್ತ ಜಾಗದ ಕೊರತೆ ಇದೆ. ಈಗಾಗಲೇ ಕಸದ ವಿಲೇವಾರಿಯನ್ನು ಸಾಧ್ಯವಾದಷ್ಟು ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು, ದಾನಿಗಳು ಮುಂದೆ ಬಂದು ಜಾಗ ನೀಡಿದರೆ, ಇನ್ನಷ್ಟು ಸಹಕಾರಿಯಾಗಲಿದೆ ಎಂದರು.

ADVERTISEMENT

ಕ್ಲೀನ್ ಕೂರ್ಗ್ ಸಂಸ್ಥೆಯ ಬಡುವಂಡ ಅರುಣ್ ಅಪ್ಪಚ್ಚು ಮಾತನಾಡಿ, ‘ಸಂಸ್ಥೆಯ ವತಿಯಿಂದ ವಿವಿಧ ಬಾಗದಲ್ಲಿ ಪರಿಸರದ ಕಾಳಜಿ ಹಾಗೂ ಕಸದ ವಿಲೇವಾರಿಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೊರ ರಾಜ್ಯಗಳನ್ನು ನೋಡಿ ಸುಂದರವಾಗಿದೆ, ಎನ್ನುವುದಕ್ಕಿಂತ ನಮ್ಮ ನಾಡನ್ನು ಶುಚಿಯಾಗಿಟ್ಟು ಹೆಮ್ಮೆಪಡಬೇಕಿದೆ. ಪ್ರತಿಯೊಬ್ಬರೂ ಕೂಡ ಅವರವರ ಪರಿಸರವನ್ನು ಶುಚಿಯಾಗಿಡಬೇಕು. ಕಸ ಮುಕ್ತ ಕೊಡಗನ್ನು ನಿರ್ಮಾಣ ಮಾಡಬೇಕು‘ ಎಂದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯ ಕಸದ ಸಮಸ್ಯೆ, ವಿಲೇವಾರಿಯ ಬಗ್ಗೆ ವಿವರಣೆ ನೀಡಿದರು. ಮಹಿಳೆಯರು ಮನೆಯಲ್ಲೇ ಕಸದ ಉತ್ಪತಿಯನ್ನು ತಡೆಯಬೇಕು. ರಸ್ತೆಯ ಬದಿಯಲ್ಲಿ ಕಸವನ್ನು ಎಸೆಯಬಾರದು ಎಂದರು.

ಚೆಶೈರ್ ಹೋಂ ನ ಪುನಿತಾ ರಾಮಸ್ವಾಮಿ, ನೆಲ್ಯಹುದಿಕೇರಿ ಗ್ರಾ.ಪಂ ಉಪಾಧ್ಯಕ್ಷೆ ಸಫಿಯಾ ಮಹಮ್ಮದ್, ಗ್ರಾ.ಪಂ ಸದಸ್ಯ ಯೋಗೇಶ್, ಜಾರ್ಜ್ ಕುರಿಯನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಸ ನಿರ್ವಹಣೆ ಹಾಗೂ ವಿಲೇವಾರಿಯ ಕುರಿತು ಸಂವಾದ ಹಾಗೂ ಚರ್ಚೆ ನಡೆಯಿತು. ವಿವಿಧ ಸದಸ್ಯರು ಕಸದ ವಿಲೇವಾರಿಗೆ ಬೇಕಾದ ಕ್ರಮಗಳು, ಸಮಸ್ಯೆ ತಡೆಗಟ್ಟುವ ವಿದಾನಗಳ ಬಗ್ಗೆ ಅಭಿಪ್ರಾಯ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಾಪುರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೀತಿಯಂಡ ವಿವೇಕ್ ವಹಿಸಿದ್ದರು. ಈ ಸಂದರ್ಭ ಕೊಡವ ಕಲ್ಚುರಲ್ ಅಸೋಸಿಯೇಷನ್ ಅಧ್ಯಕ್ಷ ದೇವಣಿರ ಸುಜಯ್, ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ವಿಶಾಲ್ ದೇವಯ್ಯ, ಪ್ರಮುಖರಾದ ಪಟ್ಟಡ ಶ್ಯಾಂ ಅಯ್ಯಪ್ಪ, ಕುಕ್ಕುನೂರು ಸುನಿಲ್, ರಾಮಸ್ವಾಮಿ, ಸಿದ್ದಾಪುರ ಗ್ರಾ.ಪಂ ಸದಸ್ಯರು, ವಿವಿಧ ಮಹೀಳಾ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.