ADVERTISEMENT

ಉರುಳಿದ ಕಾರು: ಪ್ರಯಾಣಿಕರು ಪಾರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 14:02 IST
Last Updated 3 ಆಗಸ್ಟ್ 2019, 14:02 IST
ಪ್ರಪಾತಕ್ಕೆ ಉರುಳಿದ ಕಾರು
ಪ್ರಪಾತಕ್ಕೆ ಉರುಳಿದ ಕಾರು   

ಮಡಿಕೇರಿ: ಭಾಗಮಂಡಲ–ತಲಕಾವೇರಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಶನಿವಾರ ಪ್ರಪಾತಕ್ಕೆ ಉರುಳಿ ಬಿದ್ದಿತ್ತು. ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕೆಎ 03 ಎಂಜೆ 4349 ನೋಂದಣಿಯ ಕಾರಿನಲ್ಲಿ ಪ್ರವಾಸಿಗರು ತಲಕಾವೇರಿ ದರ್ಶನ ಮುಗಿಸಿಕೊಂಡು ಭಾಗಮಂಡಲದತ್ತ ಬರುತ್ತಿದ್ದರು. ಆಗ ನಿಯಂತ್ರಣ ತಪ್ಪಿದ ಕಾರು ಉರುಳಿದೆ. ಜೆಸಿಬಿ ಯಂತ್ರದ ಸಹಾಯದಿಂದ ದಾರಿ ಮಾಡಿ ಕಾರನ್ನು ಮೇಲಕ್ಕೆ ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT