ADVERTISEMENT

ಗ್ರಾ.ಪಂ ಅಧ್ಯಕ್ಷೆ, ಕಾರ್ಯಕರ್ತೆ ಕರ್ತವ್ಯಕ್ಕೆ ಅಡ್ಡಿ

ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಲು ತೆರಳಿದ್ದ ಲಕ್ಷ್ಮಿ, ಬಿಂದು

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:58 IST
Last Updated 10 ಜೂನ್ 2021, 17:58 IST
ಸೋಮವಾರಪೇಟೆ ಸಮೀಪದ ಹಾನಗಲ್ಲು ಬಾಣೆಯಲ್ಲಿ ಯುವಕರ ಗುಂಪೊಂದು ಗ್ರಾ.ಪಂ ಅಧ್ಯಕ್ಷೆ, ಆಶಾ ಕಾರ್ಯಕರ್ತೆ ಜತೆ ಗಲಾಟೆ ಮಾಡಿತು
ಸೋಮವಾರಪೇಟೆ ಸಮೀಪದ ಹಾನಗಲ್ಲು ಬಾಣೆಯಲ್ಲಿ ಯುವಕರ ಗುಂಪೊಂದು ಗ್ರಾ.ಪಂ ಅಧ್ಯಕ್ಷೆ, ಆಶಾ ಕಾರ್ಯಕರ್ತೆ ಜತೆ ಗಲಾಟೆ ಮಾಡಿತು   

ಸೋಮವಾರಪೇಟೆ: ಸಮೀಪದ ಹಾನಗಲ್ಲುಬಾಣೆ ಗ್ರಾಮದಲ್ಲಿ ಕೊರೊನಾ ಸೋಂಕಿತರ ಯೋಗಕ್ಷೇಮ ವಿಚಾರಿಸಲು ಮಂಗಳವಾರ ತೆರಳಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪುಂಡರ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದಿದೆ.

ಗ್ರಾಮದ ಚಂದ್ರ, ಅವರ ಪತ್ನಿ, ಮಗಳಿಗೆ ಕೋವಿಡ್‌ ದೃಢಪಟ್ಟಿದೆ. ಗ್ರಾಮದ ಇನ್ನೂ ಮೂರು ಕುಟುಂಬಗಳ ಸದಸ್ಯರಿಗೆ ಸೋಂಕು ತಗುಲಿದ್ದು, ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಮನೆಗಳಿಗೆ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ, ಆಶಾ ಕಾರ್ಯಕರ್ತೆ ಬಿಂದು ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು. ಇದಕ್ಕೆ ಅಡ್ಡಿಪಡಿಸಿದ ಗುಂಪು, ಸೀಲ್‌ಡೌನ್ ಆಗಿರುವ ಕುಟುಂಬ ಸದಸ್ಯರನ್ನೂ ನಿಂದಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಲ್ಲೆಗೆ ಯತ್ನಿಸಿದ ಯುವಕರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಚಂದ್ರ ತಿಳಿಸಿದರು.

ADVERTISEMENT

ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ.ಮಹೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.