ADVERTISEMENT

ಕುಶಾಲನಗರ: ರೈತರಿಂದ ಸರಳವಾಗಿ ಹೊನ್ನರು ಉತ್ಸವಕ್ಕೆ ಚಾಲನೆ

ಹೊನ್ನಾರು ಉತ್ಸವಕ್ಕೆ ಕೊರೊನಾ ಕರಿನೆರಳು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 14:37 IST
Last Updated 26 ಮಾರ್ಚ್ 2020, 14:37 IST
ತೊರೆನೂರು ಗ್ರಾಮದಲ್ಲಿ ರೈತರಿಂದ ಸರಳವಾಗಿ ಹೊನ್ನರು ಉತ್ಸವಕ್ಕೆ ಚಾಲನೆ ನೀಡಿದರು
ತೊರೆನೂರು ಗ್ರಾಮದಲ್ಲಿ ರೈತರಿಂದ ಸರಳವಾಗಿ ಹೊನ್ನರು ಉತ್ಸವಕ್ಕೆ ಚಾಲನೆ ನೀಡಿದರು   

ಕುಶಾಲನಗರ: ಉತ್ತರ ಕೊಡಗಿನ ಬಯಲುಸೀಮೆ ಪ್ರದೇಶವಾದ ತೊರೆನೂರು ಗ್ರಾಮದಲ್ಲಿ ಬುಧವಾರ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಯುಗಾದಿಯಂದು ಹೊಸ ಸಂವತ್ಸರ ಅಂಗವಾಗಿ ರೈತರು ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ)ವನ್ನು ಸರಳವಾಗಿ ಆಚರಿಸಿದರು.

ಯುಗಾದಿ ಹಬ್ಬವು ಗ್ರಾಮೀಣ ಪ್ರದೇಶದ ರೈತರ ಪಾಲಿಗೆ ಹೊಸ ಸಂವತ್ಸರ. ಆದರೆ ಈ ವರ್ಷ ಕೊರೊನಾ ವೈರಸ್ ಹರಡದಂತೆ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಣೆ ಯಾಗಿರುವುದರಿಂದ ರೈತಾಪಿ ವರ್ಗವು ಹೊಸ ಪಂಚಾಂಗದ ಪ್ರಕಾರ ಹೊನ್ನಾರು ಉತ್ಸವವನ್ನು ಸಾಂಪ್ರಾದಾಯಿಕವಾಗಿ ಆಚರಿಸಿದರು.

ರೈತರು ತಮ್ಮ ತಮ್ಮ ಮನೆಗಳಲ್ಲೇ ಎತ್ತು ಹಾಗೂ ದನಕರುಗಳನ್ನು ನೀರಿನಿಂದ ತೊಳೆದು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ರೈತರು ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನ ಜಮೀನಿನಲ್ಲಿ ಹೊನ್ನಾರು (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ ಹಾಗೂ ಪದಾಧಿಕಾರಿಗಳು ಇದ್ದರು.

ಮೆರವಣಿಗೆ ಸ್ಥಗಿತ

ಪ್ರತಿ ವರ್ಷ ನೂರಾರು ರೈತರು ತಮ್ಮ ದನಗಳಿಗೆ ಅಲಂಕಾರ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ಅದ್ಧೂರಿಯಾಗಿ‌ ಆಚರಣೆ ಮಾಡುತ್ತಿದ್ದ ಹೊನ್ನಾರು ಉತ್ಸವವನ್ನು ಈ ಬಾರಿ ಸ್ಥಗಿತಗೊಳಿಸಲಾಯಿತು. ಸಾಮೂಹಿಕವಾಗಿ ಆಚರಣೆ ಮಾಡದೆ ರೈತರು ತಮ್ಮ ಮನೆಗಳಲ್ಲಿ ಸರಳವಾಗಿ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.