ADVERTISEMENT

ಗೋಣಿಕೊಪ್ಪಲು: ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 23 ಮೇ 2021, 5:35 IST
Last Updated 23 ಮೇ 2021, 5:35 IST
ಗೋಣಿಕೊಪ್ಪಲು ಪಟ್ಟಣದಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಯಿತು
ಗೋಣಿಕೊಪ್ಪಲು ಪಟ್ಟಣದಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಯಿತು   

ಗೋಣಿಕೊಪ್ಪಲು: ಪಟ್ಟಣ ಹಾಗೂ ಸುತ್ತಮುತ್ತ ಶನಿವಾರ ಸಂಜೆ ಉತ್ತಮ ಮಳೆಯಾಯಿತು.

ಗುಡುಗಿನೊಂದಿಗೆ ಸಂಜೆ 4.45ಕ್ಕೆ ಆರಂಭವಾದ ಮಳೆ ರಾತ್ರಿವರೆಗೆ ನಿರಂತರವಾಗಿ ಬಂತು.

ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಕುಂದ, ಅರುವತ್ತೊಕ್ಕಲು, ಹಳ್ಳಿಗಟ್ಟು, ಹಾತೂರು, ಕೈಕೇರಿ, ಅತ್ತೂರು ಹಾಗೂ ದೇವರಪುರ ಮೊದಲಾದ ಭಾಗಗಳಿಗೆ ಮಳೆಯಾಗಿದೆ.

ADVERTISEMENT

ಪಟ್ಟಣದ ಕೀರೆಹೊಳೆ ಮತ್ತು ಬೈಪಾಸ್ ತೋಡುಗಳಲ್ಲಿ ಹೊಸ ನೀರು ಕಾಣಿಸಿಕೊಂಡಿತು. ಎಲ್ಲಿಯೂ ಹಾನಿಯಾದ
ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.