ಮಡಿಕೇರಿ: ಮುದ್ದಂಡ ಕಪ್ ಹಾಕಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿ ವಿಜೇತರನ್ನು, ಶ್ರೇಷ್ಠ ಆಟಗಾರರನ್ನು ತೆರೆದ ಜೀಪಿನಲ್ಲಿ ಮೈದಾನದ ಸುತ್ತ ಮೆರವಣಿಗೆ ಮಾಡಿ ಗೌರವ ಸಲ್ಲಿಸಲಾಯಿತು.
ಕೊಡಗಿನ ಸಾಂಪ್ರದಾಯಿಕ ದುಡಿಕೊಟ್ ಪಾಟ್‌ನೊಂದಿಗೆ ನಡೆದ ಮೆರವಣಿಗೆಯಲ್ಲಿ ಸಾಧಕರು ಬರುತ್ತಿದ್ದಂತೆ ಸುತ್ತಲೂ ಸೇರಿದ್ದ ಪ್ರೇಕ್ಷಕರು ಕೈಬೀಸಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
1975ರ ವಿಶ್ವಕಪ್ ಹಾಕಿ ವಿಜೇತ ಬಿ.ಪಿ.ಗೋವಿಂದ, 1975 ವಿಶ್ವಕಪ್ ಹಾಕಿ ವಿಜೇತ ತಂಡದ ಆಟಗಾರ ಪೈಕೇರ ಕಾಳಯ್ಯ, 1980 ಮಾಸ್ಕೋ ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಾಯಕ, ಭಾರತ ತಂಡದ ತರಬೇತುದಾರ ವಾಸುದೇವ ಭಾಸ್ಕರ್, ಭಾರತೀಯ ಮಾಜಿ ಹಾಕಿ ಆಟಗಾರ ಒಲಂಪಿಯನ್ ಮನೆಯಪಂಡ ಎಂ.ಸೋಮಯ್ಯ, 1996 ಹಾಗೂ 2000 ಒಲಂಪಿಕ್ಸ್ ಆಟಗಾರ. ಏಷ್ಯನ್ ಗೇಮ್ಸ್, ವಿಶ್ವಕಪ್ ವಿಜೇತ ಮಹಮ್ಮದ್ ರಿಯಾಜ್, ಒಲಿಂಪಿಯನ್ ಹಾಗೂ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಮಾಚಿಮಂಡ ಅಶ್ವಿನಿ ಪೊನ್ನಪ್ಪ, ಒಲಿಂಪಿಯನ್ ಮನೆಯಪಂಡ ಅಶ್ವಿನಿ ನಾಚಪ್ಪ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.