ADVERTISEMENT

ಕೊಡಗು: ಮುಸ್ಲಿಂ ವ್ಯಾಪಾರಿಯನ್ನು ವಾಪಸ್ ಕಳುಹಿಸಿದ ಬಜರಂಗದಳದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 10:25 IST
Last Updated 30 ನವೆಂಬರ್ 2022, 10:25 IST

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಇಲ್ಲಿನ ಹರಿಹರ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಮಂಗಳವಾರ ನಡೆದ ಷಷ್ಠಿ ಉತ್ಸವದಲ್ಲಿ ವ್ಯಾಪಾರಕ್ಕೆಂದು ಬಂದಿದ್ದ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಬಜರಂಗದಳದ ಕಾರ್ಯಕರ್ತರು ವಾಪಸ್ ಕಳುಹಿಸಿದರು.

‘ಕೇಸರಿ ಶಾಲು ಧರಿಸಿದ ಕಾರ್ಯಕರ್ತರು ವ್ಯಾಪಾರಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿದ್ದಾಗ ಮುಸ್ಲಿಂ ವ್ಯಾಪಾರಿಯು ತಮ್ಮ ಗೆಳೆಯನ ಗುರುತಿನ ಚೀಟಿ ತೋರಿಸಿದರೆಂದು ವ್ಯಾಪಾರಕ್ಕೆ ನಿರಾಕರಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

‘ಘಟನೆ ಕುರಿತು ದೇಗುಲದ ಟ್ರಸ್ಟಿಗಳಾಗಲಿ, ವ್ಯಾಪಾರಿಗಳಾಗಲಿ ದೂರು ನೀಡಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಉತ್ಸವದಲ್ಲಿ ಎಲ್ಲ ಧರ್ಮದವರಿಗೂ ವ್ಯಾಪಾರಕ್ಕೆ ಅವಕಾಶವಿದೆ’ ಎಂದು ದೇಗುಲ ಮೊದಲೆ ಸ್ಪಷ್ಟಪಡಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.