ADVERTISEMENT

ಕೊಡಗಿನಲ್ಲಿ ಮುಂದುವರಿದ ನಿಷೇಧಾಜ್ಞೆ: ಪೊಲೀಸರಿಂದ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 8:25 IST
Last Updated 25 ಆಗಸ್ಟ್ 2022, 8:25 IST
ಪೊಲೀಸರಿಂದ ಪಥಸಂಚಲನ
ಪೊಲೀಸರಿಂದ ಪಥಸಂಚಲನ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2ನೇ ದಿನವಾದ ಗುರುವಾರ ನಿಷೇಧಾಜ್ಞೆ ಮುಂದುವರಿದಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.

ಸುಮಾರು 600 ಕ್ಕೂ ಹೆಚ್ಚಿನ ಪೊಲೀಸರನ್ನು ಹೊರಜಿಲ್ಲೆಗಳಿಂದ ಕರೆಸಲಾಗಿದೆ.

ಕರ್ನಾಟಕ ರಾಜ್ಯ ಮೀಸಲು ಪಡೆಯ 15 ಹಾಗೂ ಜಿಲ್ಲಾ ಸಶಸ್ತ್ರ ಪಡೆ 13 ತುಕಡಿಗಳು ಪಥಸಂಚಲನದಲ್ಲಿ ಭಾಗಿಯಾದವು.

ADVERTISEMENT

ಇಲ್ಲಿನ ಚೌಕಿ, ಕಾಲೇಜು ರಸ್ತೆ, ಮಹದೇವಪೇಟೆ, ಮಾರುಕಟ್ಟೆ, ಜನರಲ್ ತಿಮ್ಮಯ್ಯ ವೃತ್ತಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.