ADVERTISEMENT

ಮಡಿಕೇರಿ: ₹ 40 ಕೋಟಿ ವೆಚ್ಚದಲ್ಲಿ 252 ಕಾಮಗಾರಿಗಳಿಗೆ ಪೊನ್ನಣ್ಣ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:12 IST
Last Updated 7 ಜನವರಿ 2026, 5:12 IST
ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.   

ಮಡಿಕೇರಿ: ತಾಲ್ಲೂಕಿನ ಬೆಟ್ಟಗೇರಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.

ಕೆಆರ್‌ಐಡಿಎಲ್ ಸಂಸ್ಥೆ ಮೂಲಕ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹ 40 ಕೋಟಿ ವೆಚ್ಚದಲ್ಲಿ ಒಟ್ಟು 252 ಕಾಮಗಾರಿಗಳಿಗೆ ಅವರು ತಮ್ಮ ಅನುದಾನವನ್ನು ಹಂಚಿಕೆ ಮಾಡಿದ್ದಾರೆ.

‘ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಮೂಲಸೌಕರ್ಯ ದೊರಕಬೇಕು ಎಂಬ ಆಶಯದೊಂದಿಗೆ ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ’ ಎಂದು ಅವರು ಇದೇ ವೇಳೆ ತಿಳಿಸಿದರು.

ADVERTISEMENT

ಸಾರ್ವಜನಿಕರಿಂದ ಮತ್ತಷ್ಟು ಕೋರಿಕೆಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮುಖಂಡರಾದ ಇಸ್ಮಾಯಿಲ್, ತೆನ್ನಿರ ಮೈನಾ, ಕೊಡಗನ ತೀರ್ಥ ಪ್ರಸಾದ್, ಹನೀಫ್, ಬೆಟ್ಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ, ಮುಂಜಾಂದಿರ ಚಿಕ್ಕು ಕಾರ್ಯಪ್ಪ, ಕೇಟೋಳಿ ಮೋಹನ್ ರಾಜ್, ಅಪ್ರು ರವೀಂದ್ರ, ಹೊಸೂರು ಸೂರಜ್, ಪಿ.ಎಲ್.ಸುರೇಶ್, ಮಜೀದ್, ಬೊಳ್ದಂಡ ನಾಚಪ್ಪ, ಮಹಮದ್ ಕುಂಞ, ಮುಂಜಾಂದಿರ ಅಜಿತ್, ತೋರೆರ ಮುದ್ದಯ್ಯ, ಮುಂಜಾಂದಿರ ಸದಾ, ಕಾಳೇರಮ್ಮನ ಕುಮಾರ್, ಪಟ್ಟಡ ದೀಪಕ್, ಮೊಯ್ದು ಬೆಟ್ಟಗೇರಿ, ಹನೀಫ್ ಸಂಪಾಜೆ, ರಘು, ಮುಂಜಾಂದಿರ ಬೋಪಣ್ಣ, ಕೊಕ್ಕಂಡ ಚಂಗಪ್ಪ, ಪುದಿನೆರವನ ಆಶಾ, ಗಣೇಶ್, ಗುತ್ತಿಗೆದಾರ ನರೆನ್ ಸೋಮಯ್ಯ, ಅರ್ಚಕರಾದ ದೇವಿಪ್ರಸಾದ್ ಸೇರಿದಂತೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.