ADVERTISEMENT

ಕೊಡಗು ಜಿಲ್ಲೆಯ ಹೆಡ್‌ಕಾನ್‌ಸ್ಟೆಬಲ್ ಸಿ.ಕೆ. ರಾಜೇಶ್‌ಗೆ ಮುಖ್ಯಮಂತ್ರಿ ಪದಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 3:12 IST
Last Updated 15 ಆಗಸ್ಟ್ 2024, 3:12 IST
ರಾಜೇಶ್
ರಾಜೇಶ್   

ಮಡಿಕೇರಿ: ಕೊಡಗು ಜಿಲ್ಲೆಯ ಡಿಸಿಆರ್‌ಬಿ ವಿಭಾಗದಲ್ಲಿ ಸಿಡಿಆರ್‌ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್‌ಕಾನ್‌ಸ್ಟೆಬಲ್ ಸಿ.ಕೆ.ರಾಜೇಶ್ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.

ಭಾಗಮಂಡಲ ಸಮೀಪದ ತಣ್ಣಿಮಾಣಿ ಗ್ರಾಮದ ಕರಿಯಚ್ಚನ್ ಮತ್ತು ತೆರೆಸಾ ದಂಪತಿಯ ಪುತ್ರರಾದ ಇವರು ಬಿ.ಕಾಂ ಪದವೀಧರರು. 2002ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ ರಾಜೇಶ್‌ ಸುಂಟಿಕೊಪ್ಪ, ಮಡಿಕೇರಿ ಗ್ರಾಮಾಂತರ ಸೇರಿದಂತೆ ಹಲವೆಡೆ ಕಾರ್ಯನಿರ್ಹಹಿಸಿದ್ದಾರೆ.

ಸದ್ಯ, ಸಿಡಿಆರ್ ಘಟಕದಲ್ಲಿ ಇವರು ತೋರಿರುವ ತಾಂತ್ರಿಕ ಪರಿಣತಿಯನ್ನು ಆಧರಿಸಿ ಇವರಿಗೆ ಪದಕ ಘೋಷಿಸಲಾಗಿದೆ. ಇವರ ತಾಂತ್ರಿಕ ಕಾರ್ಯವು ಹಲವು ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.