ಸಿದ್ದಾಪುರ: ಕರಡಿಗೋಡು ರಸ್ತೆ ಸಮೀಪ ಶನಿವಾರ ಮುಂಜಾನೆ ಬಾವಿಗೆ ಬಿದ್ದ ವ್ಯಕ್ತಿಯನ್ನು ಸುಮಾರು ಮೂರು ಗಂಟೆ ಕಾರ್ಯಾಚರಣೆ ನಡೆಸಿ, ರಕ್ಷಿಸಲಾಯಿತು.
ಕರಡಿಗೋಡು ನಿವಾಸಿ ಕೃಷ್ಣ (55) ಎಂಬುವವರು ಮನೆಯ ಮುಂಭಾಗ ಇದ್ದ ಕುಡಿಯುವ ನೀರಿನ ಬಾವಿಗೆ ಕಾಲುಜಾರಿ ಬಿದ್ದಿದ್ದಾರೆ. ಪತಿ ಹುಡುಕಿಕೊಂಡು ಪತ್ನಿ ಸರಸು, ಮನೆಯ ಮುಂಭಾಗ ಬಂದಾಗ ಬಾವಿಯಿಂದ ಪತಿಯ ಧ್ವನಿ ಕೇಳಿ, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ಕೃಷ್ಣ ಅವರನ್ನು ಬಾವಿಯಿಂದ ಮೇಲೆತ್ತಲು ಯತ್ನಿಸಿ ವಿಫಲರಾಗಿದ್ದಾರೆ. ಆಗ ಗೋಣಿಕೊಪ್ಪ ಅಗ್ನಿಶಾಮಕದಳದ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ 40 ಅಡಿ ಆಳದ ಬಾವಿಯಿಂದ ಕೃಷ್ಣ ಅವರನ್ನು ಮೇಲೆತ್ತಿದ್ದಾರೆ.
ಕೃಷ್ಣ ಅವರಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾ ಯಿತು. ಸಹಾಯಕ ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿ ಭರತ್ ಕಾರ್ಯಾಚರಣೆಗೆ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.