ADVERTISEMENT

ಸುಂಟಿಕೊಪ್ಪದಲ್ಲಿ ಮಳೆ‌ ಇಳಿಮುಖ: ಹಲವೆಡೆ ವಿದ್ಯುತ್ ಕಂಬಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 4:28 IST
Last Updated 21 ಜುಲೈ 2024, 4:28 IST
ಸುಂಟಿಕೊಪ್ಪ ಸಮೀಪದ ಹೊರೂರು ಗ್ರಾಮದಲ್ಲಿ ಬಿದ್ದ ವಿದ್ಯುತ್ ಕಂಬಗಳ ಸರಿಪಡಿಸುವ ಕಾರ್ಯದಲ್ಲಿ ಸೆಸ್ಕ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು
ಸುಂಟಿಕೊಪ್ಪ ಸಮೀಪದ ಹೊರೂರು ಗ್ರಾಮದಲ್ಲಿ ಬಿದ್ದ ವಿದ್ಯುತ್ ಕಂಬಗಳ ಸರಿಪಡಿಸುವ ಕಾರ್ಯದಲ್ಲಿ ಸೆಸ್ಕ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು   

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಗಾಳಿಮಳೆಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆ. ಶನಿವಾರ ಮಳೆ ಇಳಿಮುಖವಾಗಿದೆ.

ರಾತ್ರಿ ಬೀಸಿದ ಗಾಳಿ, ಮಳೆಯಿಂದಾಗಿ ಹೊರೂರು, ನಾಕೂರು ಶಿರಂಗಾಲ, ಶಾಂತಿಗೇರಿ, ಕೆಂಚಟ್ಟಿ ಸೇರಿ ಹಲವು ಗ್ರಾಮಗಳಲ್ಲಿ ಸುಮಾರು 12 ಕಂಬಗಳು ನೆಲಕಚ್ಚಿವೆ. ಕೂಡಲೇ ಕಾರ್ಯಪ್ರವೃತ್ತರಾದ ಸೆಸ್ಕ್ ಜೆಇ ಲವಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ತ್ವರಿತಗತಿಯಲ್ಲಿ ಕಂಬಗಳ ಅಳವಡಿಕೆಯಲ್ಲಿ ತೊಡಗಿಕೊಂಡಿರುವುದು ಕಂಡುಬಂತು.

ಅದನ್ನು ಹೊರತುಪಡಿಸಿ ಶನಿವಾರ ಬೆಳಗಿನಿಂದಲೇ ಬಿಸಿಲಿನ ವಾತಾವರಣ ಗೋಚರಿಸಿತು. ಕಳೆದ ಹಲವು ದಿನಗಳಿಂದ ತತ್ತರಿಸಿ ಹೋಗಿದ್ದ ಜನತೆ ಮಳೆ ಕಡಿಮೆಯಾಗಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.