ADVERTISEMENT

ಸೋಮವಾರಪೇಟೆ | ಕಾರು- ಲಾರಿ ಡಿಕ್ಕಿ: ಚಾಲಕರು ಅಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:04 IST
Last Updated 15 ಜೂನ್ 2025, 14:04 IST
ಸೋಮವಾರಪೇಟೆ ನ್ಯಾಯಾಲಯದ ಎದುರು ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿರುವುದು
ಸೋಮವಾರಪೇಟೆ ನ್ಯಾಯಾಲಯದ ಎದುರು ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿರುವುದು   

ಸೋಮವಾರಪೇಟೆ: ಇಲ್ಲಿನ ನ್ಯಾಯಾಲಯದ ಬಳಿ ಭಾನುವಾರ‌ ಮಡಿಕೇರಿಯಿಂದ ಸೋಮವಾರಪೇಟೆಗೆ ಬರುತ್ತಿದ್ದ ಕಾರು ಹಾಗೂ ಪಟ್ಟಣದಿಂದ ಕೋವರ್‌ಕೊಲ್ಲಿ ಕಡೆಗೆ ಸಾಗುತ್ತಿದ್ದ ಲಾರಿ ನಡುವೆ ಡಿಕ್ಕಿಯಾಗಿದ್ದು, ಚಾಲಕರು ಅಪಾಯದಿಂದ ಪಾರಾಗಿದ್ದಾರೆ.

ಪಿರಿಯಾಪಟ್ಟಣದ ನಿವಾಸಿ ಪ್ರತೀಶ್ ಅವರು ಕಾರಿನಲ್ಲಿ ತಮ್ಮ ಸ್ನೇಹಿತರೊಂದಿಗೆ ಸೋಮವಾರಪೇಟೆಗೆ ಬರುತ್ತಿದ್ದಾಗ ಕಾರು ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.