ADVERTISEMENT

ಸೇನೆಗೆ ಸೇರುವ ಕುರಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:33 IST
Last Updated 21 ಫೆಬ್ರುವರಿ 2026, 6:33 IST
ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ಓಲಿವ್ ಗ್ರೀನ್ಸ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಕರ್ನಲ್ ಕೆ.ಅಶೋಕನ್ ಅವರು ಗೋಣಿಕೊಪ್ಪಲಿನ ಕಾಲ್ಸ್ ವಿದ್ಯಾಸಂಸ್ಥೆಗೆ ಈಚೆಗೆ ಭೇಟಿ ನೀಡಿದ್ದರು. ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ ಭಾಗವಹಿಸಿದ್ದರು.
ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ಓಲಿವ್ ಗ್ರೀನ್ಸ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಕರ್ನಲ್ ಕೆ.ಅಶೋಕನ್ ಅವರು ಗೋಣಿಕೊಪ್ಪಲಿನ ಕಾಲ್ಸ್ ವಿದ್ಯಾಸಂಸ್ಥೆಗೆ ಈಚೆಗೆ ಭೇಟಿ ನೀಡಿದ್ದರು. ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ ಭಾಗವಹಿಸಿದ್ದರು.   

ಮಡಿಕೇರಿ: ಗೋಣಿಕೊಪ್ಪಲಿನ ಕಾಲ್ಸ್ ವಿದ್ಯಾಸಂಸ್ಥೆಯು ರಕ್ಷಣಾ ಪಡೆಯ ಆಯ್ಕೆ ಪ್ರಕ್ರಿಯೆ ಕುರಿತ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದು, ಅದರಲ್ಲಿ ಕೇವಲ ಕಾಲ್ಸ್ ವಿದ್ಯಾಸಂಸ್ಥೆ ಮಾತ್ರವಲ್ಲ, ಇನ್ನಿತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೂ ಭಾಗವಹಿಸಲು ಅವಕಾಶ ಮಾಡಿಕೊಡಲಿದೆ.

ಈಚೆಗೆ ಶಾಲೆಗೆ ಭೇಟಿ ನೀಡಿದ್ದ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ಓಲಿವ್ ಗ್ರೀನ್ಸ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಕರ್ನಲ್ ಕೆ.ಅಶೋಕನ್ ಅವರು, ‘ಈಚೆಗೆ ಕೊಡಗಿನಿಂದ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.

ವೀರತೆ ಕೊಡಗಿನವರ ರಕ್ತದಲ್ಲೇ ಇದೆ. ಹಿಂದಿನಿಂದಲೂ ಸಂಪ್ರದಾಯ ಎಂಬಂತೆ ಕೊಡಗಿನಿಂದ ಹೆಚ್ಚು ಹೆಚ್ಚು ಮಂದಿ ಸೇನೆಗೆ ಸೇರುತ್ತಿದ್ದರು. ಆದರೆ, ಈಗ ಅದು ಕಡಿಮೆಯಾಗುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳಿಗೆ ಸೇನೆ ಸೇರುವ ಕುರಿತು ಮಾರ್ಗದರ್ಶನ ನೀಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಈ ಕಾರ್ಯಾಗಾರದಲ್ಲಿ ಭಾಗಿಯಾಗಿ ಆಯ್ಕೆಯಾದ ವಿದ್ಯಾರ್ಥಿಗಳು ಓಲಿವ್ ಗ್ರೀನ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.