
ಸೋಮವಾರಪೇಟೆ: ತಾಲ್ಲೂಕಿನ ಮುಳ್ಳೂರು ಹಾಗೂ ಜಾಗೇನಹಳ್ಳಿಯ ಸಂಯುಕ್ತ ಆಶ್ರಯದಲ್ಲಿ ಕಾರ್ಗೋಡು ಬಸವೇಶ್ವರ ದೇವಾಲಯದ 4ನೇ ವರ್ಷದ ಮಹಾಶಿವರಾತ್ರಿ ಉತ್ಸವ ಶ್ರದ್ಧಾಭಕ್ತಿಯಿಂದ ಭಾನುವಾರ ನಡೆಯಿತು.
ಬೆಳಗ್ಗಿನಿಂದ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಜರುಗಿತು. ಸಂಜೆ 6.30ಕ್ಕೆ ಪೂಜೆ ಮತ್ತು ಮಹಾ ಮಂಗಳಾರತಿ ನಡೆಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಳ್ಳೂರು ಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ಯೋಗ ಹಾಗೂ ಕರಾಟೆ ಪ್ರದರ್ಶನವು ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಶಿವನಿಗಾಗಿ ಒಂದು ರಾತ್ರಿ ಕಾರ್ಯಕ್ರಮದ ಮೂಲಕ ಭಕ್ತಿಗೀತೆಗಳು, ಚಿತ್ರಗೀತೆಗಳು, ಭರತನಾಟ್ಯ ಹಾಗೂ ವಿವಿಧ ನೃತ್ಯ ಪ್ರದರ್ಶನಗಳು ನಡೆಯಿತು. ಹೊಸೂರು ಗ್ರಾಮದಿಂದ ಆಗಮಿಸಿದ ಕಲಾವಿದರು ಚೆಂಡೆ-ಮದ್ದಳೆ ನಾದದ ಮೂಲಕ ಭಕ್ತಿ ಸುಧೆ ಹರಿಸಿದರು.
ದೇವಸ್ಥಾವನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಜಾಗೇನಹಳ್ಳಿ, ಹಿತ್ತಲಕೇರಿ, ನಿಡ್ತ ಹಾಗೂ ಮಾಲಂಬಿ ಗ್ರಾಮಗಳಿಂದ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.