
ಮಡಿಕೇರಿ: ಕೊಯಮತ್ತೂರಿನ ಈಶಾ ಯೋಗ ಕೇಂದ್ರದ ವತಿಯಿಂದ ಉಡುಪಿಯಿಂದ ಆರಂಭವಾಗಿರುವ ‘ಶಿವಯಾತ್ರೆ’ಯು ಸೋಮವಾರ ನಗರ ತಲುಪಿತು. ಸುಮಾರು 70ಕ್ಕೂ ಅಧಿಕ ಮಂದಿ ಮಡಿಕೇರಿ ಬೆಟ್ಟವನ್ನು ಕಡಿದಾದ ರಸ್ತೆಗಳಲ್ಲಿ ಸುಮಾರು 3 ಟನ್ ತೂಕದ ಮರದ ರಥವನ್ನು ಎಳೆದು ತಂದರು.
ಉಡುಪಿಯಿಂದ ತೆರಳಿದ್ದ ಬಂದ ಈ ರಥವು ಕೊಯನಾಡು ತಲುಪಿತ್ತು. ಭಾನುವಾರ ಕೊಯನಾಡಿನಿಂದ ಹೊರಟ ರಥವು ರಾತ್ರಿ ಮದೆನಾಡನ್ನು ತಲುಪಿತು. ಮದೆನಾಡಿನಿಂದ ಸೋಮವಾರ ಬೆಳಿಗ್ಗೆ ಹೊರಟ ರಥವು ಸಂಜೆ ಹೊತ್ತಿಗೆ ಮಡಿಕೇರಿ ತಲುಪಿತು.
ಜನರಲ್ ತಿಮ್ಮಯ್ಯ ವೃತ್ತದಿಂದ ಹೊರಟ ರಥವು ಕೋಟೆ, ಇಂದಿರಾಗಾಂಧಿ ವೃತ್ತ (ಚೌಕಿ) ಕಾಲೇಜು ರಸ್ತೆಯ ರಾಮಮಂದಿರ, ನಂತರ ಮಹದೇವಪೇಟೆಯ ಚೌಡೇಶ್ವರಿ ದೇಗುಲ, ಬಸವೇಶ್ವರ ದೇಗುಲ ನಂತರ ಬನ್ನಿಮಂಟಪ ತಲುಪಿತು. ಅಲ್ಲಿಂದ ಕಾಶಿಮಠಕ್ಕೆ ಬಂದ ರಥವು ಅಲ್ಲಿಯೇ ಸ್ವಯಂಸೇವಕರು ತಂಗಿದ್ದಾರೆ. ಡಿ. 23ರಂದು ಬೆಳಿಗ್ಗೆ ಸಂಪಿಗೆ ಕಟ್ಟೆ ಮೂಲಕ ಸುಂಟಿಕೊಪ್ಪದತ್ತ ತೆರಳಲಿದೆ ಎಂದು ಸ್ವಯಂಸೇವಕರು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ವಿವಿಧ ಭಜನಾ ತಂಡಗಳು ಶಿವಯಾತ್ರೆಯಲ್ಲಿ ಪಾಲ್ಗೊಂಡು ಸದಸ್ಯರು ಭಜನಾ ಹಾಡುಗಳನ್ನು ಹಾಡಿದರು. ದಾರಿಯುದ್ದಕ್ಕೂ ಭಕ್ತರು ಪುಷ್ಪಾರ್ಚನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.