ADVERTISEMENT

ಮಡಿಕೇರಿ ರೆಸಾರ್ಟ್‌ನಲ್ಲಿ ಸಿದ್ದರಾಮಯ್ಯ ರಿಲ್ಯಾಕ್ಸ್‌

​ಪ್ರಜಾವಾಣಿ ವಾರ್ತೆ
Published 6 ಮೇ 2019, 11:37 IST
Last Updated 6 ಮೇ 2019, 11:37 IST
ಸಿದ್ದರಾಮಯ್ಯ 
ಸಿದ್ದರಾಮಯ್ಯ    

ಮಡಿಕೇರಿ: ‘ಮೈತ್ರಿ’ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಮೀಪದ ‘ಇಬ್ಬನಿ ರೆಸಾರ್ಟ್‌’ನಲ್ಲಿ ವಾಸ್ತವ್ಯ ಹೂಡಿದ್ದು ವಿಶ್ರಾಂತಿ ಮೊರೆ ಹೋಗಿದ್ದಾರೆ.

ಮಡಿಕೇರಿ–ಮೈಸೂರು ರಸ್ತೆಯಲ್ಲಿ ಹಸಿರಿನ ಕಾಫಿ ತೋಟದ ನಡುವೆ ಇರುವ ಈ ರೆಸಾರ್ಟ್‌ಗೆ ತಮ್ಮ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಜತೆಗೆ ಭಾನುವಾರ ಬಂದಿರುವ ಅವರು ಎರಡು ದಿನಗಳಿಂದ ರಾಜಕೀಯ ಒತ್ತಡ ಹಾಗೂ ವಿಧಾನಸಭೆ ಉಪ ಚುನಾವಣೆ ಪ್ರಚಾರದಿಂದ ದೂರು ಉಳಿದು ರಿಲ್ಯಾಕ್ಸ್‌ನಲ್ಲಿದ್ದಾರೆ.

ರೆಸಾರ್ಟ್‌ನಿಂದ ಹೊರಬಂದಿಲ್ಲ. ಸ್ಥಳೀಯ ಕಾಂಗ್ರೆಸ್‌ ಮುಖಂಡರಿಗೂ ವಾಸ್ತವ್ಯದ ಮಾಹಿತಿ ನೀಡಿಲ್ಲ. ‘ಇದು ಅವರ ಖಾಸಗಿ ಭೇಟಿಯಾಗಿರುವ ಕಾರಣ ನಾವು ರೆಸಾರ್ಟ್‌ಗೆ ತೆರಳುತ್ತಿಲ್ಲ’ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಆತ್ಮೀಯರು ಕೊಡಗಿನಲ್ಲಿದ್ದು ಅವರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಮೈಸೂರಿನಿಂದಲೇ ಅವರ ಬೆಂಬಲಿಗರು ಎರಡು ಕೊಠಡಿ ಬುಕ್‌ ಮಾಡಿದ್ದರು ಎನ್ನಲಾಗಿದೆ.

ADVERTISEMENT

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಉಡುಪಿ ರೆಸಾರ್ಟ್‌ ವಾಸ್ತವ್ಯದ ಬಳಿಕ ಸಿದ್ದರಾಮಯ್ಯ ರೆಸಾರ್ಟ್‌ ವಾಸ್ತವ್ಯ ಕುತೂಹಲ ಮೂಡಿಸಿದೆ. ಮಂಗಳವಾರ ಬೆಳಿಗ್ಗೆ ಮೈಸೂರಿಗೆ ತೆರಳುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.